Wednesday, October 4, 2023
spot_imgspot_img
spot_imgspot_img

ಅಕ್ರಮ ಸಂಬಂಧ; ಮನನೊಂದು ಪ್ರೇಮಿಗಳು ಆತ್ಮಹತ್ಯೆ

- Advertisement -G L Acharya panikkar
- Advertisement -

ಕೊಪ್ಪಳ: ತನ್ನ ಗಂಡನ ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಗಂಡ ಹಾಗೂ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಷ್ಟಗಿ ತಾಲೂಕು ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ.

ಮಾಲಗಿತ್ತಿ ಗ್ರಾಮದ ವಿವಾಹಿತ ಟ್ರಾಕ್ಟರ್ ಡ್ರೈವರ್ ಪೀರಸಾಬ್ ನಧಾಪ್ ನೊಂದಿಗೆ ಅದೇ ಗ್ರಾಮದ ಶಾರವ್ವ ಶರಣಪ್ಪ ಬಸಾಪೂರ ಜೊತೆ ಅಕ್ರಮ ಸಂಬಂಧ ಇತ್ತು. ಈ ಅಕ್ರಮ ಸಂಬಂಧದ ವಿಷಯ ಪೀರಸಾಬ್ ನ ಪತ್ನಿಗೆ ಗೊತ್ತಾಗಿದೆ. ಗಂಡನ ಅಕ್ರಮದ ಬಗ್ಗೆ ಕುಪಿತಗೊಂಡ ಪತ್ನಿ, ಗಂಡನ ಪ್ರೇಯಸಿ ಶಾರವ್ವ ಜೊತೆ ಕ್ಯಾತೆ ತೆಗೆದಿದ್ದು, ಗಂಡನನ್ನು ಪ್ರಶ್ನೆ ಮಾಡಿದ್ದಾಳೆ. ಈ ಪ್ರಕರಣ ಇಷ್ಟಕ್ಕೆ ಬೀಡದೇ ಊರಿನ ಹಿರಿಯರ ಮುಂದೆ ಪ್ರಸ್ತಾಪಿಸಿದ್ದಾಳೆ. ಊರಿನ ಹಿರಿಯರು ಈ ಜಗಳ ಇತ್ಯರ್ಥಗೊಳಿಸುವುದಾಗಿ ತಿಳಿಸಿದ್ದಾರೆ.

ಇವರ ಅಕ್ರಮದ ಗುಟ್ಟು ಪತ್ನಿಯಿಂದ ರಟ್ಟಾಗಿರುವ ಬಗ್ಗೆ ಮನನೊಂದ ಪಾಗಲ್ ಪ್ರೇಮಿಗಳು, ಡ್ರೈವರ್ ಪೀರಸಾಬ್ ನ ಚಿಕ್ಕಪ್ಪ ಹುಸೇನಸಾಬ್ ನದಾಫ್ ಊರಿನ ಹಿರಿಯರ ಸಮ್ಮುಖದಲ್ಲಿ ಇತ್ಯರ್ಥವಾಗುವ ಮೊದಲೇ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಹನುಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸೈ ಸುನೀಲ್ ಎಚ್. ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!