Thursday, June 18, 2026
spot_imgspot_img
spot_imgspot_img

ಅನೈತಿಕ ಸಂಬಂಧ; ವಿವಾಹಿತ ಮಹಿಳೆಯ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ..!

- Advertisement -
- Advertisement -

ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಮಹಿಳೆಗೆ ವ್ಯಕ್ತಿಯೋರ್ವ ಆಯುಧದಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ತುಂಗನಗರ ಪೊಲೀಸ್ ಠಾಣೆಯಲ್ಲಿ 307 ಪ್ರಕರಣ ದಾಖಲಾಗಿದೆ.

ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಸವಿತ ಎಂಬ 35 ವರ್ಷದ ವಿವಾಹಿತ ಮಹಿಳೆಯ ಮೇಲೆ ಶಿವನಾಯ್ಕ್(35) ಎಂಬ ವ್ಯಕ್ತಿ ವಡ್ಡಿನಕೊಪ್ಪದಲ್ಲಿ ಮನೆಗೆ ನುಗ್ಗಿ ಕುತ್ತಿಗೆಯನ್ನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.

ಸಧ್ಯಕ್ಕೆ ಶಿವನಾಯ್ಕ್ ಮತ್ತು ಮಹಿಳೆ ಸವಿತರನ್ನ‌ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಸವಿತ ಮತ್ತು ಶಿವನಾಯ್ಕ್ ಇಬ್ಬರಿಗೂ ಮದುವೆಯಾಗಿದೆ. ಒಂದೇ ಕಡೆ ಕೆಲಸ ಮಾಡುವಾಗ ಇಬ್ಬರೂ ಸಂಪರ್ಕಕ್ಕೆ ಬಂದಿದ್ದಾರೆ.

ಅನೇಕ ಬಾರಿ ಹಿರಿಯರು ಬುದ್ದಿವಾದ ಹೇಳಿದರೂ ಇಬ್ಬರೂ ತಮ್ಮ ಸಂಸಾರವನ್ನ ನೋಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸವಿತ ಶಿವನಾಯ್ಕ್ ರನ್ನ ದೂರ ಮಾಡಿದ್ದರಿಂದ ಇಂದು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಶಿವನಾಯ್ಕ್ ಗೆ ಮೂವರು ಮಕ್ಕಳಿದ್ದರು.

- Advertisement -

Related news

error: Content is protected !!