Monday, June 15, 2026
spot_imgspot_img
spot_imgspot_img

ದರ್ಶನ್​ಗೆ ಹೆಚ್ಚಿದ ಸಂಕಷ್ಟ; A2 ನಿಂದ A1 ಮಾಡಿ ಚಾರ್ಜ್​ಶೀಟ್​ ಸಲ್ಲಿಕೆಗೆ ತಯಾರಿ!

- Advertisement -
- Advertisement -

ಕೊಲೆ ಕೇಸ್​ನಲ್ಲಿ ಜೈಲು ಸೇರಿರೋ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅವರಿಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಿದೆ. ರೇಣುಕಾ ಸ್ವಾಮಿ ಕೇಸ್​ನಲ್ಲಿ ದರ್ಶನ್ ​A2 ಆಗಿದ್ದರು. ನಟಿ ಪವಿತ್ರಾ ಗೌಡ A1 ಆಗಿದ್ದರು. ಆದರೀಗ, ಪೊಲೀಸರು ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಲು ಮುಂದಾಗಿದ್ದು, ದರ್ಶನ್​ ಅವರನ್ನೇ A1 ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ಕೊನೇ ಹಂತಕ್ಕೆ ಬಂದಿದೆ. ತನಿಖೆ ವೇಳೆ ನಟನ ವಿರುದ್ಧ ಹಲವು ಪ್ರಮುಖ ಸಾಕ್ಷಿಗಳು ಸಿಕಿದ್ದು, ಇವರೇ ಕೊಲೆ ಮಾಡಿಸಿರುವುದು ಎಂಬುದು ಬಹುತೇಕ ಖಚಿತವಾಗಿದೆ. ಎಲ್ಲ ಪ್ರಮುಖ ಸಾಕ್ಷಿಗಳು ದರ್ಶನ್​ ವಿರುದ್ಧವಾಗಿ ಇರುವುದರಿಂದ ಕೇಸ್​ನಲ್ಲಿ A1 ಆಲಿದ್ದಾರೆ. A2ನಿಂದ A1 ಮಾಡಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

ಹೈಪ್ರೊಫೈಲ್​ ಕೇಸ್​ ಆದ್ದರಿಂದ ತುಂಬ ಗಂಭೀರವಾಗಿ ತನಿಖೆ ನಡೆದಿದೆ. ಹಲವು ಬಗೆಯ ಸಾಕ್ಷಿಗಳನ್ನು ಕಲೆ ಹಾಕಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಮೊಬೈಲ್ ರಿಟ್ರೀವ್​ ಮಾಡಲಾಗಿದೆ. ಇದರಲ್ಲಿ ರೇಣುಕಾ ಸ್ವಾಮಿಯ ನಾಲ್ಕು ಫೋಟೋಗಳು ಲಭ್ಯವಾಗಿವೆ. ಸಾಯುವುದಕ್ಕೂ ಮುನ್ನ ರಕ್ತಸಿಕ್ತವಾಗಿದ್ದ ಆತ ಕೈ ಮುಗಿದು ಬೇಡಿಕೊಳ್ಳುತ್ತಿರುವ ಫೋಟೋ ಕೂಡ ಪೊಲೀಸರಿಗೆ ಸಿಕ್ಕಿದೆ. ಆರೋಪಿಗಳಾದ ಪ್ರದೋಶ್ ಮತ್ತು ಇನ್ನೊಬ್ಬನ ಮೊಬೈಲ್​ನಿಂದ ಈ ಫೋಟೋ ರಿಟ್ರೀವ್ ಆಗಿದೆ. ಇದು ಪ್ರಮುಖ ಸಾಕ್ಷಿ ಆಗಲಿದೆ.

- Advertisement -

Related news

error: Content is protected !!