Friday, May 17, 2024
spot_imgspot_img
spot_imgspot_img

ವಾಯುಮಾಲಿನ್ಯದಿಂದ ಸಾವನ್ನಪ್ಪಿದ ಭಾರತೀಯ ನವಜಾತ ಶಿಶುಗಳ ಸ್ಟೇಟ್ ಆಫ್ ಗ್ಲೋಬಲ್ ಏರ್ ವರದಿ

- Advertisement -G L Acharya panikkar
- Advertisement -

ನವದೆಹಲಿ: 2020ರಲ್ಲಿ 1,16,000ಕ್ಕೂ ಹೆಚ್ಚು ಭಾರತೀಯ ನವಜಾತ ಶಿಶುಗಳು ವಾಯುಮಾಲಿನ್ಯದಿಂದ ಸಾವನ್ನಪ್ಪಿವೆ ಎಂದು ಸ್ಟೇಟ್ ಆಫ್ ಗ್ಲೋಬಲ್ ಏರ್ ವರದಿ ಮಾಡಿದೆ.

ಇತ್ತಿಚೆಗೆ ನಡೆಸಿದ ಅಧ್ಯಯನದಲ್ಲಿ, ಕಳಪೆ ಗುಣಮಟ್ಟದ ಅಡುಗೆ ಇಂಧನಗಳಿಂದ ಹೊರಬರುವ ಹಾನಿಕಾರಕ ಹೊಗೆಯಿಂದಲೂ 3/2ರಷ್ಟು ಶಿಶುಗಳ ಸಾವು ಸಂಭವಿಸಿದೆ ಎನ್ನಲಾಗಿದೆ. ಗರ್ಭಾವಸ್ಥೆಯಲ್ಲಿರುವ ತಾಯಂದಿರು ವಾಯುಮಾಲಿನ್ಯ ಇರುವ ಪ್ರದೇಶದಲ್ಲಿ ಇದ್ದರೆ ಹುಟ್ಟುವ ಮಕ್ಕಳ ಮೇಲೂ ಅದು ಪರಿಣಾಮ ಬೀರಲಿದೆ. ಶಿಶುಗಳು ಅವಧಿ ಮುಂಚೆಯೇ ಜನಿಸುವುದು, ಹಾಗೂ ಕಡಿಮೆ ತೂಕ ಇರುವುದು ಇಂತಹ ತೊಂದರೆಗಳಿಂದ ಶಿಶುಗಳು ಸಾವನ್ನಪ್ಪುತ್ತಿವೆ ಎನ್ನಲಾಗಿದೆ. 2019ರಲ್ಲಿ 4,76,000 ನವಜಾತ ಶಿಶುಗಳು ವಾಯುಮಾಲಿನ್ಯಕ್ಕೆ ಬಲಿಯಾಗಿದ್ದಾರೆ.


ಆಫ್ರಿಕಾ ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದು, 2,36,000 ಶಿಶುಗಳು ಸಾವನ್ನಪ್ಪಿವೆ ಎಂದು ಅಧ್ಯಯನ ತಿಳಿಸಿದೆ.
ಯುಎಸ್ ಮೂಲದ ಹೆಲ್ತ್ ಎಫೆಕ್ಟ್ಸ್ ಇನ್‌ಸ್ಟಿಟ್ಯೂಟ್ ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಪ್ರಾಜೆಕ್ಟ್ ಈ ಅಧ್ಯಯನ ನಡೆಸಿದೆ.

- Advertisement -

Related news

error: Content is protected !!