Friday, May 17, 2024
spot_imgspot_img
spot_imgspot_img

41 ವರ್ಷಗಳಷ್ಟು ಹಳೆಯ ರಾಜಮನೆತನದ ವಿವಾಹದ ಕೇಕ್‌ ಪೀಸ್ ಹರಾಜು..!

- Advertisement -G L Acharya panikkar
- Advertisement -

ಲಂಡನ್: ರಾಜಕುಮಾರಿ ಡಯಾನಾ ಮತ್ತು ಕಿಂಗ್ ಚಾರ್ಲ್ಸ್ ಅವರ ವಿವಾಹದ ಕೇಕ್ ಸ್ಲೈಸ್ ಹರಾಜಿಗಿಡಲಾಗಿದೆ.

1981 ರಲ್ಲಿ ನಡೆದ ರಾಜಮನೆತನದ ವಿವಾಹದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಅತಿಥಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆ ವೇಳೆ ನೀಡಲಾಗಿದ್ದ ಕೇಕ್‌ ಅನ್ನು ನಿಗೆಲ್‌ ರಿಕೆಟ್ಸ್‌ ಎಂಬ ಅತಿಥಿ ಸಂರಕ್ಷಿಸಿಟ್ಟಿದ್ದರು. ಆದರೆ ನಿಗೆಲ್ ರಿಕೆಟ್ಸ್ ಕಳೆದ ವರ್ಷ ನಿಧನರಾಗಿದ್ದಾರೆ.

ಕೇಕ್ ಅನ್ನು ಅದರ ಮೂಲ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಲಾಗಿದ್ದು, ಇದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ನಿರೀಕ್ಷಿಸಲಾಗಿದೆ.

ದಿ ಪೋಸ್ಟ್ ವರದಿಯ ಪ್ರಕಾರ, ಮದುವೆಗಾಗಿ 23 ಅಧಿಕೃತ ವಿವಾಹದ ಕೇಕ್‌ಗಳನ್ನು ತಯಾರಿಸಲಾಗಿದ್ದರೂ, ಹರಾಜಿಗಿಟ್ಟಿರುವ ಕೇಕ್ ಸ್ಲೈಸ್ ಐದು ಪದರಗಳನ್ನು ಹೊಂದಿರುವ ಮತ್ತು ಐದು ಅಡಿ ಎತ್ತರದ ಮಧ್ಯಭಾಗದ ಹಣ್ಣಿನ ಕೇಕ್‌ ಪೀಸ್ ಇರಬಹುದು ಎಂದು ಅಂದಾಜಿಸಲಾಗಿದೆ.

- Advertisement -

Related news

error: Content is protected !!