Monday, June 15, 2026
spot_imgspot_img
spot_imgspot_img

ಭಾರತಕ್ಕೆ ಪಾಕ್ ಮಾರ್ಗವಾಗಿ ಬರುತ್ತಿದ್ದ ಕೋಟ್ಯಾಂತರ ಮೌಲ್ಯದ ಹೆರಾಯಿನ್ – 6 ಇರಾನ್ ಪ್ರಜೆಗಳು ಅರೆಸ್ಟ್

- Advertisement -
- Advertisement -

ಪಾಕಿಸ್ತಾನ ಮಾರ್ಗವಾಗಿ ಭಾರತಕ್ಕೆ ಬರುತ್ತಿದ್ದ, 200 ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 200 ಕೆಜಿ ಹೆರಾಯಿನ್ ಅನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಭಾರತೀಯ ನೌಕಾಪಡೆಯು ವಶಕ್ಕೆ ಪಡೆದುಕೊಂಡಿದ್ದು, 6 ಇರಾನ್ ಪ್ರಜೆಗಳನ್ನು ಬಂಧಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಯಾರಿಸಿದ ಹೆರಾಯಿನ್ ಅನ್ನು ಇರಾನ್ ಮೀನುಗಾರಿಕಾ ಹಡಗಿನಲ್ಲಿ ತುಂಬಿಕೊಂಡು ಪಾಕ್ ಮಾರ್ಗವಾಗಿ ಭಾರತಕ್ಕೆ ತರಲಾಗುತ್ತಿದ್ದು, ಇದನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಮಾರಾಟ ಮಾಡುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಇನ್ನು ಖಚಿತ ಮಾಹಿತಿಯ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂ. ಬೆಲೆಬಾಳುವ ಹೆರಾಯಿನ್ ಸೀಜ್ ಮಾಡಲಾಗಿದ್ದು, 6 ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ.

astr
- Advertisement -

Related news

error: Content is protected !!