Friday, March 29, 2024
spot_imgspot_img
spot_imgspot_img

ಏಪ್ರಿಲ್ 24 ರಿಂದ 30ರವರೆಗೆ ಶೆಡ್ಯೂಲ್ ಆಗಿದ್ದ ಭಾರತ-ಇಂಗ್ಲೆಂಡ್ ನಡುವಿನ ಏರ್​ ಇಂಡಿಯಾ ವಿಮಾನ ಹಾರಾಟ ರದ್ದು!

- Advertisement -G L Acharya panikkar
- Advertisement -

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಉಲ್ಬಣವಾಗ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಮಾನ ಹಾರಾಟವನ್ನು ರದ್ದು ಮಾಡಲಾಗಿದೆ.

ಏಪ್ರಿಲ್ 24 ರಿಂದ 30ರವರೆಗೆ ಶೆಡ್ಯೂಲ್ ಆಗಿದ್ದ ಇಂಡಿಯಾ-ಯುಕೆ ಏರ್​ ಇಂಡಿಯಾ ವಿಮಾನಗಳನ್ನು ರದ್ದು ಮಾಡಲಾಗಿದೆ ಎಂದು ಸಂಸ್ಥೆ ಘೋಷಣೆ ಮಾಡಿದೆ.

ಏಪ್ರಿಲ್ 19ರಂದು ಭಾರತದಿಂದ ಬ್ರಿಟನ್​ಗೆ ತೆರಳುವ ಪ್ರಯಾಣಿಕರಿಗೆ ಅಲ್ಲಿನ ಸರ್ಕಾರ ನಿಷೇಧ ಹೇರಿತ್ತು. ಹೀಗಾಗಿ ಯುಕೆಯಿಂದ ಭಾರತಕ್ಕೆ ಬರುವ ಹಾಗೂ ಭಾರತದಿಂದ ಯುಕೆಗೆ ಹೋಗುವ ಎಲ್ಲಾ ವಿಮಾನಗಳ ಹಾರಾಟವನ್ನ ಏರ್​ ಇಂಡಿಯಾ ರದ್ದು ಮಾಡಿದೆ.

ಅಲ್ಲದೇ ಈಗಾಗಲೇ ಟಿಕೆಟ್ ಬುಕ್ ಮಾಡಿದವರಿಗೆ ಹಣವನ್ನ ಮರುಪಾವತಿ ಮಾಡುವ ಬಗ್ಗೆ ಮತ್ತು ಹೊಸ ಶೆಡ್ಯೂಲ್​ ಬಗ್ಗೆ ಸದ್ಯದಲ್ಲೇ ತಿಳಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

- Advertisement -

Related news

error: Content is protected !!