Monday, June 8, 2026
spot_imgspot_img
spot_imgspot_img

ಭಾರತ – ಚೀನ ನಡುವೆ 5 ವರ್ಷದ ಬಳಿಕ ವಿಮಾನ ಸಂಚಾರ ಆರಂಭ

- Advertisement -
- Advertisement -

ನವದೆಹಲಿ: ಭಾರತ ಮತ್ತು ಚೀನ ಮಧ್ಯೆ 5 ವರ್ಷದ ಬಳಿಕ ನೇರ ವಿಮಾನ ಸಂಚಾರ ಆರಂಭಗೊಳ್ಳಲಿದೆ. ನಾಗರಿಕ ವಿಮಾನಯಾನ ಅಧಿಕಾರಿಗಳ ನಡುವಿನ ನಿರಂತರ ಚರ್ಚೆಗಳ ನಂತರ ಈ ತಿಂಗಳ ಅಂತ್ಯದ ವೇಳೆಗೆ ನೇರ ವಿಮಾನ ಸೇವೆಗಳನ್ನು ಪುನರಾರಂಭಿಸಲು ಭಾರತ ಮತ್ತು ಚೀನ ಒಪ್ಪಿಕೊಂಡಿವೆ.

ಶಾಂಫೈ ಸಹಕಾರ ಸಂಸ್ಥೆ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನಡೆದ ಮಹತ್ವದ ಸಭೆಯ ಬಳಿಕ ವಿಮಾನ ಹಾರಾಟಕ್ಕೆ ಎರಡೂ ದೇಶಗಳು ಒಪ್ಪಿಗೆ ನೀಡಿವೆ.ಅಕ್ಟೋಬ‌ರ್ 26ರಿಂದ ಕೋಲ್ಕತ್ತಾದಿಂದ ಗುವಾಂಗ್‌ಝಗೆ ಪ್ರತಿನಿತ್ಯ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ. ಮೂಲಗಳ ಪ್ರಕಾರ ಏರ್ ಇಂಡಿಯಾ ವರ್ಷಾಂತ್ಯದ ವೇಳೆಗೆ ಚೀನಕ್ಕೆ ತನ್ನ ವಿಮಾನ ಸೇವೆಗಳನ್ನು ಪುನರಾರಂಭಿಸುವ ಸಾಧ್ಯತೆಯಿದೆ.ಡೋಕ್ಲಾಮ್ ಘರ್ಷಣೆಯ ಬಳಿಕ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗ ಬಂದ ನಂತರ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಮತ್ತೆ ಆರಂಭಗೊಂಡಿರಲಿಲ್ಲ.

- Advertisement -

Related news

error: Content is protected !!