Monday, July 27, 2026
spot_imgspot_img
spot_imgspot_img

ವಿಶ್ವಸಂಸ್ಥೆಯ ಆಡಳಿತಾತ್ಮಕ ಹಾಗೂ ಹಣಕಾಸು ಸಲಹಾ ಸಮಿತಿಗೆ ಚುನಾವಣೆ

- Advertisement -
- Advertisement -

ವಿಶ್ವಸಂಸ್ಥೆಯ ಆಡಳಿತಾತ್ಮಕ ಹಾಗೂ ಹಣಕಾಸು ಪ್ರಶ್ನೆಗಳ ಸಲಹಾ ಸಮಿತಿಗೆ (ACABQ) ನಡೆದ ಚುನಾವಣೆಯಲ್ಲಿ, ಭಾರತೀಯ ರಾಜತಾಂತ್ರಿಕ ಅಧಿಕಾರಿ ವಿದಿಷಾ ಮೈತ್ರಾ ಕಠಿಣ ಸ್ಪರ್ಧೆಯ ನಡುವೆಯೂ ಆಯ್ಕೆಯಾಗಿದ್ದಾರೆ. ಈ ಮೂಲಕ ಏಷ್ಯಾ ಪೆಸಿಫಿಕ್‌ ಭಾಗದಿಂದ ಈ ಸಲಹಾ ಸಮಿತಿಗೆ ಆಯ್ಕೆಯಾದ ಮೊದಲ ಭಾರತೀಯ ಪ್ರಜೆ ವಿದಿಷಾ ಮೈತ್ರಾ ಆಗಿದ್ದು, ಉಳಿದ ಅಭ್ಯರ್ಥಿಗಳು ಇರಾಕ್ ಮೂಲದವರಾಗಿದ್ದಾರೆ. ಇವರೆಲ್ಲರೂ ACABQನಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. 

193 ಸದಸ್ಯರನ್ನೊಳಗೊಂಡ ಸಾಮಾನ್ಯ ಸಭೆಯು ACABQ ಸಮಿತಿಗೆ ಸದಸ್ಯರನ್ನು ನೇಮಕ ಮಾಡುತ್ತದೆ. ಭೌಗೋಳಿಕ ಪ್ರಾತಿನಿಧ್ಯ, ವೈಯಕ್ತಿಕ ಅರ್ಹತೆ ಹಾಗೂ ಅನುಭವಗಳನ್ನು ಪರಿಗಣಿಸಿ ಈ ನೇಮಕಾತಿ ನಡೆಯುತ್ತದೆ. ಮತ್ತೊಬ್ಬ ಅಭ್ಯರ್ಥಿ ಇರಾಕ್‌ನ ಆಲಿ ಮೊಹಮ್ಮದ್‌ ಫೇಕ್‌ ಆಲ್‌ ದಬಾಕ್‌ ಎದುರು 126 ಮತಗಳಿಗೆ 64 ಮತಗಳನ್ನು ಪಡೆಯುವ ಮೂಲಕ ವಿದಿಶಾ ಮೈತ್ರಾ ಅಯ್ಕೆಯಾಗಿದ್ದಾರೆ.

ACABQ ಸದಸ್ಯರಾಗಿ ಆಯ್ಕೆಯಾಗಿರುವ ವಿದಿಷಾ ಮೈತ್ರಾ ಅವರ ಅವಧಿ ಮೂರೂವರೆ ವರ್ಷಗಳಾಗಿದ್ದು, 2021 ಜನವರಿ 1ರಂದು ಆರಂಭವಾಗಲಿದೆ. ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯ ದೇಶವಾಗಿ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ಬೆನ್ನಲ್ಲೇ ಮೈತ್ರಾ ಅವರು ವಿಶ್ವಸಂಸ್ಥೆಯ ಸಲಹಾ ಸಮಿತಿಗೆ ನೇಮಕವಾಗಿದ್ದಾರೆ.

16 ಸದಸ್ಯರನ್ನೊಳಗೊಂಡಿರುವ ಈ ಸಮಿತಿ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅವರು ಸಾಮಾನ್ಯ ಸಭೆಗೆ ಸಲ್ಲಿಸಿದ ಬಜೆಟ್ ಪರಿಶೀಲನೆ ಮತ್ತು ಆಡಳಿತಾತ್ಮಕ ಮತ್ತು ಬಜೆಟ್ ವಿಷಯಗಳ ಬಗ್ಗೆ ಸಾಮಾನ್ಯ ಸಭೆಗೆ ಸಲಹೆ ನೀಡುವುದು ಸೇರಿದಂತೆ ಹಲವಾರು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ.

- Advertisement -

Related news

error: Content is protected !!