Tuesday, July 21, 2026
spot_imgspot_img
spot_imgspot_img

ಕನ್ಯಾನ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಯೋಮೆಟ್ರಿಕ್ಸ್ ಕುರಿತು ಮಾಹಿತಿ ಕಾರ್ಯಕ್ರಮ

- Advertisement -
- Advertisement -

ಕನ್ಯಾನ, ಮಾರ್ಚ್ 23 : ಕಾಲೇಜು ವಿದ್ಯಾರ್ಥಿಗಳಲ್ಲಿ ಬಯೋಮೆಟ್ರಿಕ್ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಾಹಿತಿ ಕಾರ್ಯಕ್ರಮವನ್ನು ಕನ್ಯಾನ ಸರ್ಕಾರಿ ಪದವಿ ಕಾಲೇಜಿನ ಐಕ್ಯೂಎಸಿ ವತಿಯಿಂದ ಆಯೋಜಿಸಲಾಗಿತ್ತು. ಕರ್ನಾಟಕ ಪಬ್ಲಿಕ್ ಪಿಯು ಕಾಲೇಜು ಕನ್ಯಾನದ ಐಟಿ ತರಬೇತುದಾರರಾದ ಶ್ರೀಮತಿ ಶಿಲ್ಪಾ ಅವರು ಬಯೋಮೆಟ್ರಿಕ್ಸ್ ಎಂದರೇನು, ಕಾರ್ಯವಿಧಾನಗಳು, ಬಳಕೆ ಕುರಿತು ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸವಿತಾ, ಶ್ರೀಮತಿ ಚೈತ್ರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿ ಸುಹಾಸಿನಿ ಎನ್. ವಿ. ಸ್ವಾಗತಿಸಿ, ರೇಷ್ಮಾ ಎ. ಕೆ. ಮತ್ತು ಬಳಗ ಪ್ರಾರ್ಥಿಸಿ, ಶ್ರಾವಣ್ಯ ವಂದಿಸಿ, ಶರಣ್ಯ ನಿರೂಪಿಸಿದರು.

- Advertisement -

Related news

error: Content is protected !!