Thursday, March 28, 2024
spot_imgspot_img
spot_imgspot_img

IPL 2021: ಪಂಜಾಬ್​​ ವಿರುದ್ಧ ಮುಂಬೈ ಇಂಡಿಯನ್ಸ್​ಗೆ 6 ವಿಕೆಟ್​ಗಳ ಭರ್ಜರಿ ಗೆಲುವು

- Advertisement -G L Acharya panikkar
- Advertisement -
driving

ಇಂಡಿಯನ್​​ ಪ್ರೀಮಿಯರ್​​ ಲೀಗ್​​​ 14ನೇ ಸೀಸನ್​​​ನ 42ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಕೆ. ಎಲ್ ರಾಹುಲ್​​ ನೇತೃತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಟಾಸ್​​ ಸೋತು ಮೊದಲು ಬ್ಯಾಂಟಿಗ್​​ ಮಾಡಿದ ಪಂಜಾಬ್​​ ಕಿಂಗ್ಸ್​, ನಿಗದಿತ 20 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತು. ಈ ರನ್​​ಗಳ ಬೆನ್ನತ್ತಿದ ಮುಂಬೈ 29 ಓವರ್​​​ಗಳಲ್ಲಿ 4 ವಿಕೆಟ್​​ ಕಳೆದುಕೊಂಡು 137 ರನ್​ ಗಳಿಸುವ ಮೂಲಕ ಗೆದ್ದಿದೆ. ಹ್ಯಾಟ್ರಿಕ್​​ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಈ ಪಂದ್ಯವೂ ಗೆಲುವು ತಂದು ಕೊಟ್ಟಿದೆ. ಈಗ ಮುಂಬೈ ಪ್ಲೇ ಆಫ್​​ ಪ್ರವೇಶ ಕನಸು ಜೀವಂತವಾಗಿದೆ.

ಪಂಜಾಬ್​​ ಪರ ಬ್ಯಾಟಿಂಗ್​​ ಮಾಡಿದ ರಾಹುಲ್​​ 21, ಮಂದೀಪ್​​ 14, ಐಡೆನ್ ಮಾರ್ಕ್ರಮ್ 42, ದೀಪಕ್​​ ಹೂಡಾ 28 ರನ್​​​ ಗಳಿಸಿದ್ದು 135 ರನ್​​ ಪೇರಿಸಲು ಕಾರಣವಾಗಿತ್ತು.

ಮುಂಬೈ ಪರ ರೋಹಿತ್ ಶರ್ಮಾ 8, ಕ್ವಿಂಟನ್ ಡಿ ಕಾಕ್ 27, ಸೌರಭ್ ತಿವಾರಿ 45, ಹಾರ್ದಿಕ್ ಪಾಂಡ್ಯ 40, ಕೀರನ್ ಪೊಲ್ಲಾರ್ಡ್15 ರನ್​​ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

- Advertisement -

Related news

error: Content is protected !!