Wednesday, June 24, 2026
spot_imgspot_img
spot_imgspot_img

ಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 3 ವಿಕೆಟ್ ಗಳ ಭರ್ಜರಿ ಜಯ

- Advertisement -
- Advertisement -

ಮುಂಬೈ: ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಮೂರು ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

ಒಂದು ಹಂತದಲ್ಲಿ ರಾಜಸ್ಥಾನ ಸೋಲಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಡೇವಿಡ್ ಮಿಲ್ಲರ್ ಹಾಗೂ ಕ್ರಿಸ್ ಮೋರಿಸ್ (36*) ಅಮೋಘ ಇನ್ನಿಂಗ್ಸ್ ಕಟ್ಟುವ ಮೂಲಕ ರಾಜಸ್ಥಾನ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ಪಂತ್ ಏಕಾಂಗಿ ಹೋರಾಟದ(51) ನಿಂದಾಗಿ ಡೆಲ್ಲಿ 148 ರನ್ ಗಳಿಸಿತ್ತು.

ಶಿಖರ್ ಧವನ್(9), ಪೃಥ್ವಿ ಶಾ(2), ಅಜಿಂಕ್ಯ ರಹಾನೆ(8) ಒಂದಂಕಿ ಸ್ಕೋರ್ ಗಳಿಸಿದರು. ಟಾಮ್ ಕರನ್(21) ಲಲಿತ್ ಯಾದವ್(20)ಹಾಗೂ ಕ್ರಿಸ್ ವೋಕ್ಸ್(15)ಎರಡಂಕೆಯ ಸ್ಕೋರ್ ಗಳಿಸಿದರು. ರಾಜಸ್ಥಾನ ಪರವಾಗಿ ಜಯದೇವ್ ಉನದ್ಕಟ್(3-15) ಹಾಗೂ ಮುಸ್ತಫಿಝುರ್ರಹ್ಮಾನ್(2-29) ಐದು ವಿಕೆಟ್ ಹಂಚಿಕೊಂಡರು.

- Advertisement -

Related news

error: Content is protected !!