Friday, April 19, 2024
spot_imgspot_img
spot_imgspot_img

ಮೈಸೂರು: ಶೂಟೌಟ್ ಪ್ರಕರಣದ ಇಬ್ಬರು ಆರೋಪಿಗಳು ಸೆರೆ; ಸಂಬಂಧಿಕರೇ ಸುಪಾರಿ ಕೊಟ್ಟಿರುವ ಶಂಕೆ

- Advertisement -G L Acharya panikkar
- Advertisement -

ಮೈಸೂರು: ಮೈಸೂರಿನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ರಾಜಸ್ಥಾನ ಮೂಲದ ಸತ್ಯೇಂದ್ರ ಪಾಲ್ ಸಿಂಗ್ ಹಾಗೂ ತೇಜವೀರ್ ಸಿಂಗ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು.

ಘಟನೆಯ ವಿವರ: ಆ.23ರಂದು ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಆಂಡ್ ಸಿಲ್ವರ್ ಪ್ಯಾಲೇಸ್‌ನಲ್ಲಿ ಮಾಲೀಕನಿಗೆ ಥಳಿಸಿ ಬಳಿಕ ಚಿನ್ನಾಭರಣ ದರೋಡೆ ಮಾಡಲಾಗಿತ್ತು. ಅಲ್ಲದೇ ಚಿನ್ನದ ಅಂಗಡಿಗೆ ಬಂದಿದ್ದ ಚಂದ್ರು ಎಂಬ ಗ್ರಾಹಕನ ಮೇಲೆ ಗುಂಡು ಹಾರಿಸಿದ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದರು. ಗ್ರಾಹಕ ಚಂದ್ರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ದರೋಡೆಕೋರರ ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆಯ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಸಿಸಿಟಿವಿಯ ದೃಶ್ಯವನ್ನು ಆಧಾರಿಸಿ ತನಿಖೆ ನಡೆಸಿದ ಪೊಲೀಸರು, ಇದೀಗ ದರೋಡೆಕೋರರನ್ನು ಬಂಧಿಸಿದ್ದು, ಆರೋಪಿಗಳಿಂದ ಶೂಟೌಟ್ ಸಂಬಂಧ ಮಹತ್ವದ ಮಾಹಿತಿ ಸಂಗ್ರಹಿಸಿರುವಂತ ಅವರು, ದರೋಡೆ ಹಿಂದೆ ಸುಫಾರಿ ನೀಡಿರೋ ಶಂಕೆಯನ್ನು ವ್ಯಕ್ತ ಪಡಿಸಿದ್ದಾರೆ. ಇದಷ್ಟೇ ಅಲ್ಲದೇ ಜ್ಯೂವೆಲರಿ ಅಂಗಡಿ ಮಾಲೀಕನ ಏಳಿಗೆ ಸಹಿಸದೇ ಸಂಬಂಧಿಕರೇ ಸುಪಾರಿ ಕೊಟ್ಟು, ಶೂಟೌಟ್ ಗೆ ಕಾರಣರಾಗಿದ್ದಾರೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.

- Advertisement -

Related news

error: Content is protected !!