Sunday, June 14, 2026
spot_imgspot_img
spot_imgspot_img

ಎರಡು ಪಂದ್ಯ-ಮೂರು ತಂಡಗಳ ಭವಿಷ್ಯ ನಿರ್ಧಾರ

- Advertisement -
- Advertisement -

ಅಬುಧಾಬಿ: ಇಂದು ನಡೆಯುವ ಎರಡು ಐಪಿಎಲ್‌ ಪಂದ್ಯಗಳು ಮೂರು ತಂಡಗಳ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗಲಿದೆ.

ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಪಂಜಾಬ್‌ ಮುಖಾಮುಖೀಯಾಗಲಿವೆ. ರಾತ್ರಿ ಕೋಲ್ಕತಾ-ರಾಜಸ್ಥಾನ್‌ ಸೆಣಸಲಿವೆ. ಈ ನಾಲ್ಕೂ ತಂಡಗಳಿಗೆ ಇದು ಕೊನೆಯ ಲೀಗ್‌ ಪಂದ್ಯವಾಗಿರುವುದರಿಂದ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ.

ಕೆಕೆಆರ್‌, ಪಂಜಾಬ್‌, ರಾಜಸ್ಥಾನ್‌ ತಲಾ 12 ಅಂಕ ಹೊಂದಿವೆ. ಆದರೆ ಈ ಪಂದ್ಯದಲ್ಲಿ ಕೇವಲ ಗೆದ್ದರಷ್ಟೇ ಸಾಲದು, ಜತೆಗೆ ರನ್‌ರೇಟ್‌ ಕೂಟ ಉತ್ತಮವಾಗಿರಬೇಕು. ಒಂದು ವೇಳೆ ಮೊದಲ ಪಂದ್ಯದಲ್ಲಿ ಪಂಜಾಬ್‌ ಜಯಿಸಿದರೆ ಇನ್ನೊಂದರಲ್ಲಿ ರಾಜಸ್ಥಾನ್‌ ಅಥವಾ ಕೆಕೆಆರ್‌ ಗೆದ್ದರೆ ಆಗ ಎರಡು ತಂಡಗಳ ಅಂಕ 14ಕ್ಕೆ ಏರುತ್ತದೆ. ಆಗ ಉತ್ತಮ ರನ್‌ರೇಟ್‌ ಹೊಂದಿರುವವರಿಗೆ ಲಾಭವಾಗಲಿದೆ.ಇಂದಿನ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಪಂಜಾಬ್‌ ಸೋತರೆ ಐಪಿಎಲ್ ಕೂಟದಿಂದ ನಿರ್ಗಮಿಸಲಿದೆ.

- Advertisement -

Related news

error: Content is protected !!