Monday, June 22, 2026
spot_imgspot_img
spot_imgspot_img

ಕೊರೊನಾ ಮಾರ್ಗಸೂಚಿ ಉಲ್ಲಂಘಿಸದಂತೆ ಐಪಿಎಲ್ ಆಟಗಾರರಿಗೆ ಬಿಸಿಸಿಐ ಸೂಚನೆ

- Advertisement -
- Advertisement -

ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಟೂರ್ನಿ ದುಬೈನಲ್ಲಿ ಆರಂಭವಾಗಲಿದ್ದು, ಈಗಾಗಲೇ ಕಿಂಗ್ಸ್ ಇಲೆವೆನ್ ಪಂಜಾಬ್, ರಾಜಸ್ಥಾನ ರಾಯಲ್ಸ್, ಕೆಕೆಆರ್ ತಂಡಗಳು ಅರಬ್ ರಾಷ್ಟ್ರಕ್ಕೆ ಕಾಲಿಟ್ಟಿವೆ. ಈ ನಡುವೆ ಐಪಿಎಲ್ ಆಟಗಾರರಿಗೆ ಬಿಸಿಸಿಐ ಕೊರೊನಾ ಮಾರ್ಗಸೂಚಿ ಉಲ್ಲಂಘಿಸದಂತೆ ಸೂಚನೆ ನೀಡಿದೆ.

ಐಪಿಎಲ್ ತಂಡಗಳ ಆಟಗಾರರು, ತರಬೇತುದಾರರು, ಫ್ರಾಂಚೈಸಿ ಮಾಲೀಕರಿಗೂ ಕೋವಿಡ್ ನಿಯಮ ಉಲ್ಲಂಘಿಸದಂತೆ ಸಂದೇಶ ರವಾನಿಸಿದೆ. ಒಬ್ಬರ ತಪ್ಪಿನಿಂದಾಗಿ ಮತ್ತೊಬ್ಬರಿಗೆ ಸೋಂಕು ತಗುಲಿ ತೊಂದರೆಯಾಗಬಾರದು. ಯುಎಇ ನಲ್ಲಿ ಕೊರೊನಾ ಸೋಂಕು ಕಮ್ಮಿ ಏನು ಆಗಿಲ್ಲ. ಹಲವು ಅಡೆತಡೆಗಳ ಬಳಿಕ ಟೂರ್ನಿ ನಡೆಯುತ್ತಿದ್ದು, ಎಲ್ಲರೂ ಕೊರೊನಾ ಮಾರ್ಗಸೂಚಿ ಪಾಲಿಸಿ ಎಂದು ತಿಳಿಸಿದೆ.

- Advertisement -

Related news

error: Content is protected !!