- Advertisement -
- Advertisement -
ಮಡಿಕೇರಿ: ಕೊಡಗಿನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 3 ದಿನಗಳ ಬಳಿಕ ಓರ್ವರ ಶವ ಪತ್ತೆಯಾಗಿದೆ. ಬೆಟ್ಟ ಕುಸಿದ ಪರಿಣಾಮ ತಲಕಾವೇರಿ ದೇಗುಲದ ಅರ್ಚಕ ನಾರಾಯಣಾರ್ಚಾಯ ಅವರ ಕುಟುಂಬ ಕಣ್ಮರೆಯಾಗಿತ್ತು. ನಂತರ ಎನ್ ಡಿ ಆರ್ ಎಫ್ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂದು ಮಳೆ ಪ್ರಮಾಣ ಸ್ವಲ್ಪ ಕಡಿಮೆಯಿದ್ದ ಪರಿಣಾಮ ಓರ್ವರ ಶವ ಪತ್ತೆಯಾಗಿದೆ.
ಇದು ನಾರಾಯಣಚಾರ್ಯರ ಸಹೋದರ ಆನಂದತೀರ್ಥ ಅವರ ಮೃತದೇಹ ಎಂದು ಗುರುತಿಸಲಾಗಿದೆ. ಇನ್ನುಳಿದವರ ಪತ್ತೆಯಾಗಿ ಎನ್ ಡಿ ಆರ್ ಎಫ್ ತಂಡ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಇನ್ನು ಸ್ಥಳೀಯರು ಕೂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ತಲಕಾವೇರಿ ದುರಂತ:ಭೂಕುಸಿತದ ಸ್ಥಳದಲ್ಲಿ ನಾರಾಯಣಾಚಾರ್ಯ ಸಹೋದರ ಆನಂದತೀರ್ಥ ಅವರ ಮೖತದೇಹ ಪತ್ತೆ
Posted by Vtv Vitla on Saturday, 8 August 2020
- Advertisement -