Tuesday, April 23, 2024
spot_imgspot_img
spot_imgspot_img

ಪಾಕ್ ಮೇಲೆ ಇರಾನ್ ಸರ್ಜಿಕಲ್ ಸ್ಟ್ರೈಕ್ – ಪಾಕ್ ನ ಹಲವು ಉಗ್ರರು ಬಲಿ!

- Advertisement -G L Acharya panikkar
- Advertisement -

ಟೆಹರಾನ್: ಇರಾನ್‍ನ ಎಲೈಟ್ ರೆವಲ್ಯೂಶನರಿ ಗಾಡ್ರ್ಸ್(ಐಆರ್ ಜಿಸಿ) ಸೈನಿಕರು ದಾಳಿ ನಡೆಸಿದ್ದು, ಪಾಕ್‍ನ ಹಲವು ಸೇನಾಧಿಕಾರಿಗಳು ಈ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇರಾನ್‍ನ ಇಬ್ಬರು ಸೈನಿಕರನ್ನು ಪಾಕಿಸ್ತಾನದ ಉಗ್ರರು ಮೂರು ವರ್ಷಗಳ ಹಿಂದೆ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಇರಾನ್ ಈ ಬೃಹತ್ ದಾಳಿ ನಡೆಸಿದ್ದು, ಭಯೋತ್ಪಾದಕರಿಗೆ ರಕ್ಷಣೆ ನೀಡಿದ್ದ ಹಲವು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮಿಷನ್ ಸಕ್ಸಸ್‍ಫುಲ್ ಎಂದು ಐಆರ್ ಜಿಸಿ ಹೇಳಿಕೆ ನೀಡಿದ್ದು, ಕಿಡ್ನಾಪ್ ಆಗಿದ್ದ ಇಬ್ಬರು ಸೈನಿಕರನ್ನು ಕೂಡ ರಕ್ಷಿಸಲಾಗಿದೆ ಎಂದು ಹೇಳಿದೆ.

ಎರಡೂವರೆ ವರ್ಷಗಳ ಹಿಂದೆ ಜೈಶ್ ಉಲ್-ಆಡ್ಲ್ ಸಂಘಟನೆಯಿಂದ ಅವರನ್ನು ಒತ್ತೆಯಾಳಾಗಿ ಮಾಡಿಕೊಳ್ಳಲಾಗಿತ್ತು. ಇದೀಗ ಸರ್ಜಿಕಲ್ ಸ್ಟ್ರೈಕ್ ವೇಳೆ ಅವರನ್ನು ರಕ್ಷಿಸಿ ಮರಳಿ ಇರಾನ್‍ಗೆ ಕರೆ ತರಲಾಗಿದೆ ಎಂದು ಐಆರ್ ಜಿಸಿ ಹೇಳಿಕೆ ನೀಡಿದೆ.

2018 ರ ಅಕ್ಟೋಬರ್ ನಲ್ಲಿ ಕನಿಷ್ಠ 12 ಐಆರ್ ಜಿಸಿ ಸೈನಿಕರನ್ನು ಜೈಶ್ ಉಲ್-ಆಡ್ಲ್ ಸಂಘಟನೆಯ ಉಗ್ರರು ಮರ್ಕಾವಾ, ಸಿಸ್ತಾನ್ ಹಾಗೂ ಬಲುಚಿಸ್ತಾನ್ ಪ್ರದೇಶದಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಬಳಿಕ ಇವರನ್ನು ಬಿಡುಗಡೆ ಮಾಡಲು ಸೇನೆಯ ಅಧಿಕಾರಿಗಳು ಎರಡೂ ದೇಶಗಳ ಜಂಟಿ ಸಮಿತಿ ರಚಿಸಿದ್ದರು.

ಇದರ ಫಲವಾಗಿ ಐವರನ್ನು 2018 ನವೆಂಬರ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಬಳಿಕ ನಾಲ್ವರು ಇರಾನಿ ಸೈನಿಕರನ್ನು 2019 ಮಾರ್ಚ್ ನಲ್ಲಿ ಪಾಕಿಸ್ತಾನಿ ಸೇನೆ ರಕ್ಷಣೆ ಮಾಡಿತ್ತು. ಇದೀಗ ಇರಾನ್ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಉಳಿದ ಇಬ್ಬರು ಸೈನಿಕರನ್ನು ರಕ್ಷಿಸಿದೆ.

- Advertisement -

Related news

error: Content is protected !!