- Advertisement -
- Advertisement -
ಟೆಹ್ರಾನ್: ಇರಾನಿನ ನಾಗರಿಕರು ತಮ್ಮ ‘ಸುರಕ್ಷತೆ’ಗಾಗಿ ಸ್ಥಳೀಯ ಸಮಯ ರಾತ್ರಿ 9 ಗಂಟೆಯವರೆಗೆ ರೈಲುಗಳನ್ನು ಬಳಸಬೇಡಿ ಎಂದು ಇಸ್ರೇಲ್ ಸೇನೆ ಎಚ್ಚರಿಕೆ ನೀಡಿದೆ.

ಈ ಕುರಿತು ತನ್ನ ಪರ್ಷಿಯನ್ ಭಾಷೆಯ X ಖಾತೆಯಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, “ನಿಮ್ಮ ಸುರಕ್ಷತೆಗಾಗಿ ರೈಲುಗಳಲ್ಲಿ ಪ್ರಯಾಣಿಸುವುದನ್ನು ಹಾಗೂ ರೈಲು ಮಾರ್ಗಗಳ ಸುತ್ತಮುತ್ತ ಇರುವುದನ್ನು ತಪ್ಪಿಸಿ” ಎಂದು ತಿಳಿಸಿದೆ.“ರೈಲುಗಳಲ್ಲಿ ಮತ್ತು ರೈಲು ಮಾರ್ಗಗಳ ಸುತ್ತಮುತ್ತ ನಿಮ್ಮ ಉಪಸ್ಥಿತಿಯು ನಿಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ” ಎಂದು ಇಸ್ರೇಲ್ ಸೇನೆಯು ಎಚ್ಚರಿಸಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಸಾರ್ವಜನಿಕ ಮೂಲಸೌಕರ್ಯಗಳ ಸುತ್ತ ಭದ್ರತಾ ಆತಂಕಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.
- Advertisement -








