Tuesday, July 21, 2026
spot_imgspot_img
spot_imgspot_img

ಕೇರಳ: ಲವ್ ಬ್ರೇಕಪ್ ನಿಂದ ಮನ ನೊಂದು ರೈಲಿಗೆ ಕಲ್ಲೆಸೆದ ಯುವಕ ಅರೆಸ್ಟ್!

- Advertisement -
- Advertisement -

ಕೇರಳ: ಲವ್ ಬ್ರೇಕಪ್ ಆಗಿದಕ್ಕೆ ಮನ ನೊಂದು ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲೆಸೆದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಆಲುವಾದಲ್ಲಿ ನಡೆದಿದೆ.

ಸುಜಿತ್ ಸುರೇಶ್(19) ಬಂಧಿತ ಆರೋಪಿ. ತಿರುವನಂತಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಮೂರು ಬಾರಿ ಕಲ್ಲು ಎಸೆದಿದ್ದು, ಇದರ ಪರಿಣಾಮ ರೈಲಿನ ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ.

ಈತನ ಪ್ರೇಯಸಿಯ ಮನೆಯು ರೈಲ್ವೆ ಹಳಿಗಳ ಸಮೀಪದಲ್ಲೇ ಇದ್ದು, ಆಕೆ ತನ್ನನ್ನು ಬಿಟ್ಟು ಹೋಗಿದ್ದಾಳೆಂಬ ಕೋಪ ಮತ್ತು ಪ್ರೇಮ ವೈಫಲ್ಯದ ಬೇಸರದಿಂದ ರೈಲಿನ ಮೇಲೆ ಕಲ್ಲೆಸೆದಿರುವುದಾಗಿ ಪೊಲೀಸರ ವಿಚಾರಣೆಯ ವೇಳೆ ತಿಳಿಸಿದ್ದಾನೆ.

ರೈಲ್ವೇ ಹಳಿಗಳ ಸಮೀಪ ಪದೇ ಪದೇ ಸುಳಿದಾಡುತ್ತಿದ್ದ ಈತನನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ರೈಲ್ವೆ ಪೊಲೀಸರು ಗುರುತಿಸಿ ಬಂಧಿಸಿದ್ದಾರೆ. ರೈಲ್ವೆ ಪೊಲೀಸರು ಈತನ ವಿರುದ್ಧ ಭಾರತೀಯ ರೈಲ್ವೆ ಕಾಯ್ದೆ 153ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!