Sunday, July 19, 2026
spot_imgspot_img
spot_imgspot_img

ಇರಾನ್ ಸರ್ವೋಚ್ಛ ನಾಯಕ ಖಮೇನಿ ಸಾವನ್ನ ಸಂಭ್ರಮಿಸಿದ ಇರಾನ್ ಮಹಿಳೆಯರು!

- Advertisement -
- Advertisement -

ಟೆಹ್ರಾನ್: ಇಸ್ರೇಲ್ ಹಾಗೂ ಅಮೆರಿಕ ಜಂಟಿ ಕ್ಷಿಪಣಿ ದಾಳಿ ನಡೆಸಿ ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲ ಅಲಿ ಖಮೇನಿಯನ್ನು ಹತ್ಯೆ ಮಾಡಿದೆ. ಇದರಿಂದ ಇರಾನ್ ದುಖಃದಲ್ಲಿ ಮುಳುಗಿದ್ದರೇ ಇರಾನ್‌ನ ಮಹಿಳೆಯರು ಮಾತ್ರ ಖಮೇನಿಯ ಸಾವನ್ನು ಸಂಭ್ರಮಿಸುತ್ತಿದ್ದಾರೆ.

ಇಸ್ಲಾಮಿಕ್ ಗಣರಾಜ್ಯದ ಮೇಲೆ ಅಮೆರಿಕ-ಇಸ್ರೇಲಿ ನಡೆಸಿದ ಜಂಟಿ ದಾಳಿಯಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸ್ಟೇಟ್ಸ್ ಮೀಡಿಯಾ ಖಚಿತಪಡಿಸಿದೆ. ಈ ಬೆಳವಣಿಗೆ ಬಳಿಕ ಇರಾನ್ ದೇಶಾದ್ಯಂತ 40 ದಿನಗಳ ಶೋಕಾಚರಣೆ ಘೋಷಿಸಿದೆ. ಆದರೆ ಇರಾನ್‌ನ ಮಹಿಳೆಯರು ಮಾತ್ರ ಖಮೇನಿ ಸಾವನ್ನು ಸಂತಸದಿಂದ ಸಂಭ್ರಮಿಸುತ್ತಿದ್ದಾರೆ. ಇರಾನ್ ಮುಕ್ತವಾಗುತ್ತಿದೆ, ಸ್ವಾತಂತ್ರ್ಯವಾಗುತ್ತಿದೆ, ಇದು ಅತ್ಯಂತ ಸಂತೋಷದಾಯಕ ದಿನ ಎಂದು ಹುಡುಗಿಯೊಬ್ಬಳು ಪೋಸ್ಟ್ ಮಾಡಿದ್ದಾಳೆ. ಮತ್ತೊಂದು ಕಡೆ ಖಮೇನಿ ಈಸ್ ಡೆಡ್ ಎಂದು ಕೂಗುತ್ತಾ ಇರಾನ್‌ನ ಮಹಿಳೆ ಸಂತೋಷ ವ್ಯಕ್ತಪಡಿಸಿದ್ದಾಳೆ. ಕಣ್ಣೀರು ಹಾಕುತ್ತಾ ರಸ್ತೆಯಲ್ಲಿ ಓಡಾಡುವ ಇರಾನ್ ಪ್ರಜೆಗಳಿಗೆ ಖಮೇನಿ ಈಸ್ ಡೆಡ್ ಅಂತಾ ಕೂಗಿ ಹೇಳಿ ಥ್ಯಾಂಕ್ಸ್ ಅಮೆರಿಕ ಅಂತಾ ಆನಂದಭಾಷ್ಪ ಸುರಿಸಿದ್ದಾಳೆ. ಮತ್ತೊಂದು ಹುಡುಗಿ ಡ್ಯಾನ್ಸ್ ಮಾಡಿ ಖಮೇನಿ ಸಾವನ್ನು ಸಂಭ್ರಮಿಸಿದ್ದಾಳೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!