Friday, May 3, 2024
spot_imgspot_img
spot_imgspot_img

ಮಂಗಳೂರು: ಪೊಲೀಸರ ಲಾಠಿ ಏಟಿಗೆ ಪ್ರಜ್ಞೆ ಕಳೆದುಕೊಂಡಿದ್ದೆ, ಎಚ್ಚರ ಆಗುವಾಗ ಮೂರು ದಿನ ಕಳೆದಿತ್ತು: ಕರಸೇವಕ ಗೋಕುಲದಾಸ ಶೆಣೈ ನೆನಪು

- Advertisement -G L Acharya panikkar
- Advertisement -

ಮಂಗಳೂರು: ಪೊಲೀಸರ ಲಾಠಿ ಏಟಿಗೆ ಪ್ರಜ್ಞೆ ಕಳೆದುಕೊಂಡಿದ್ದೆ. ಎಚ್ಚರ ಆಗುವಾಗ ಮೂರು ದಿನ ಕಳೆದಿತ್ತು ಎಂದು ಭಾವುಕರಾದರು ಅಂದು ಅಯೋಧ್ಯೆಗೆ ಕರಸೇವಕರಾಗಿ ಹೋಗಿದ್ದ ವಿಟ್ಲ ಶೆಣೈ ಕೋಲ್ಡ್ ಹೌಸ್ ನ ಗೋಕುಲದಾಸ ಶೆಣೈ ಅವರು ಆಯೋಧ್ಯೆಗೆ ಕರಸೇವಕರಾಗಿ ಹೋಗಿ ಬಂದ ತಮ್ಮ ಅನುಭವದ ಕುರಿತು ಅನಿಸಿಕ ಕೇಳಿದಾಗ ಅಂದು ನೋವು ಅನುಭವಿಸಿದ್ದರೂ ಇಂದು ತುಂಬಾ ತುಂಬಾ ಲಕ್ಷಾಂತರ ಕರಸೇವಕರ ಬಲಿದಾನ ಆಗಿದ್ದರೂ ಕೋಟಿ ಕೋಟಿ ಭಾರತೀಯರ ಆರಾಧ್ಯಮೂರ್ತಿ ಶ್ರೀರಾಮನಿಗೆ ಅಯೋಧ್ಯೆಯಲ್ಲಿ ಭವ್ಯ ದಿವ್ಯ ಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಯಾಗಿದೆ. ನಾವು ಭಾಗ್ಯವಂತರು ,ಎಂದವರು ಆನಂದಭಾಷ್ಪ ಸುರಿಸಿದರು.

ಮಂಗಳೂರಿನಿಂದ ಹೊರಟ ಮೊದಲ ತಂಡದಲ್ಲಿ ನಾವು 30 ಜನರು ಇದ್ದೆವು. ನಂತರ ಹೊರಟ ಎರಡನೇ ತಂಡದಲ್ಲಿ ಕೂಡ ಸರಿ ಸುಮಾರು 30 ಮಂದಿ ಇದ್ದರು. ಸರಿ ಸುಮಾರು 32-33 ವರ್ಷಗಳು ಕಳೆದ ಎಲ್ಲರ ಹೆಸರುಗಳು ತಕ್ಷಣಕ್ಕೆ ನೆನಪಿಗೆ ಬರ್ತಾ ಇಲ್ಲ. ಆದರೂ ಡಾ ಪ್ರಭಾಕರ ಭಟ್ ಅವರ ಸಾರಥ್ಯದ ನಮ್ಮ ತಂಡದಲ್ಲಿ ಸುಳ್ಯದ ಅಣ್ಣಾ ವಿನಯಚಂದ್ರ , ಇಡ್ಕಿದುವಿನ ಕ. ಶಿ. ವಿಶ್ವನಾಥ ಉರಿಮಜಲು, ಪುಣಚದ ಜಯಶ್ಯಾಮ ನೀರ್ಕಜೆ, ವಿಟ್ಲದ ಸತೀಶ, ಪೂರ್ಣಾನಂದ ಭಟ್ ,ಸೇರಾಜೆ ಭಟ್ ಮತ್ತಿತರರು ಇದ್ದರು. ಮಂಗಳೂರಿನಿಂದ ರೈಲಿನಲ್ಲಿ ಪುಯಾಣಿಸಿದೆವು. ಮಾಣಿಕ್ಯಪುರದಲ್ಲಿ ರೈಲಿನಿಂದ ಇಳಿಯುತ್ತಿದ್ದಂತೆ ನಮ್ಮನ್ನು ಬಂಧಿಸಲಾಯಿತು. ಜೈಶ್ರೀರಾಮ್, ಮಂದಿರವನ್ನೇ ಕಟ್ಟುವೆವು ಎಂಬ ಘೋಷಣೆ ಕೂಗುತ್ತಲೇ ಇದ್ದೆವು. ಭಾಷೆಯ ಸಮಸ್ಯೆ, ಆಹಾರ ಸಮಸ್ಯೆ ಇದ್ದವು ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನ ಮಾಡುತ್ತಾ ಇದೆವು.

ಜಯಶ್ಯಾಮ ನೀರ್ಕಜೆ ಅವರ ಜೋಕ್ ಗಳು ನಮ್ಮಲ್ಲಿ ಜೋಶ್ ತುಂಬುತ್ತಿದ್ದವು ತಮ್ಮ ದೇಸಿ ಶೈಲಿಯಲ್ಲಿ ಅಲ್ಲಿನ ಪೊಲೀಸರ ಜತೆಗಿನ ಸಂಭಾಷಣೆಗಳು ನಮಗೆ ಅಚ್ಚರಿ ಹುಟ್ಟಿಸುತ್ತಿದ್ದವು. ಏನು ಮಾತನಾಡಿಸಿರಿ ಪೊಲೀಸರ ಹತ್ತಿರ ಅಂತ ಕೇಳಿದ್ರೆ ಅವರ ಭಾಷೆ ನನಗೆ ಅರ್ಥ ಆಗಲಿಲ್ಲ ನನ್ನ ಭಾಷೆ ಅವರಿಗೆ ಅರ್ಥ ಆಗುತ್ತಾ ಇರಲಿಲ್ಲ ಅಂದರು. ವಿಟ್ಲದ ಭವಾನಿ ಟಯರ್ಸನ ಮಾಲಕರಾಗಿದ್ದ ಕೊಗ್ಗು ನಾಯಕ್ (ಕಾರು ಹೊಗ್ಗಣ್ಣ) ಅವರು ಚಪಾತಿ ಮಾಡಿಸಿ ಕಟ್ಟಿ ಕೊಟ್ಟಿದ್ದು ಉತ್ತರ ಪ್ರದೇಶ ತಲುಪುವ ತನಕದ ನಮ್ಮ ಆಹಾರ ಸಮಸ್ಯೆಯನ್ನು ನೀಗಿಸಿತ್ತು ಎಂದು ಶೆಣೈ ಅವರು ನೆನಪಿಸಿಕೊಂಡರು

ಹದಿಹರೆಯದ ಉತ್ಸಾಹಿಗಳಾಗಿದ್ದರೂ ಒಂದು ತರಹ ಆತಂಕ, ಭಯದ ವಾತಾವರಣ ಅಲ್ಲಿ ಸೃಷ್ಟಿ ಆಗಿತ್ತು. ಶಾಲೆಯಲ್ಲಿ ಕೂಡಿ ಹಾಕಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು, ಅಲ್ಲಿಂದ ತಪ್ಪಿಸಿಕೊಂಡು ಅಯೋಧ್ಯೆ ಕಡೆ ಸಾಗಿದೆವು. ಅಲ್ಲೊಂದು ದೊಡ್ಡ ನದಿ ಹರಿಯುತ್ತಾ ಇತ್ತು. ಅಂಬಿಗರು ಯಾವುದೇ ಶುಲ್ಕ ಪಡೆಯದೇ ನದಿಯನ್ನು ದಾಟಿಸಿದರು. ಭಾಷೆಯ ಸಮಸ್ಯೆ ಕಾರಣ ಸನ್ನೆಗಳಲ್ಲೇ ಸಂವಹನ ನಡೆಸುತ್ತಿದ್ದೆವು. ಮುಲಾಯಮ್ ಸಿಂಗ್ ಯಾದವ್ ಸರಕಾರದಿಂದ ಮತ್ತೆ ಪುನಹ ಬಂಧನಕ್ಕೆ ಒಳಗಾದೆವಿ. ಬಂಧನದಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಅವರ ಬಲವಾದ ಲಾಠಿ ಏಟಿಗೆ ನಾನು ಮತ್ತು ಇನ್ನೂ ಕೆಲವರು ಮೂರ್ಛೆ ತಪ್ಪಿದೆವು. ನನಗೆ ಎಚ್ಚರ ಆದಾಗ ಮೂರು ದಿನಗಳು ಕಳೆದಿದ್ದವು. ನಾಥ್ ಪಂಥದ ಸ್ವಾಮೀಜಿಗಳು ಹಸಿಹಾಲಿಗೆ ಸೊಪ್ಪಿನ ರಸ ಬೆರೆಸಿ ಕುಡಿಸಿ ನಮ್ಮನ್ನು ಸಾವಿನ ಮನೆಯ ಬಾಗಿಲಿನಿಂದ ಹೊರತಂದಿದ್ದರು.

ರಾಮನಾಮ ಸ್ಮರಣೆ ಭಜನೆ ಕೀರ್ತನೆ ನಿರಂತರ ಮಾಡುತ್ತಿದ್ದವು. ಡಾ ಪ್ರಭಾಕರ ಭಟ್ ಅವರೇ ಭಜನೆ ಹೇಳುವ ಮೂಲಕ ಪ್ರೇರಣೆ ನೀಡುತ್ತಿದ್ದವು. ಅಲ್ಲಿಂದ ಬೆಂಗಳೂರು ರೈಲು ಹತ್ತಿ ಊರಿಗೆ ಹೊರಡುವ ಮುನ್ನ ಉತ್ತರ ಪ್ರದೇಶದಲ್ಲಿದ್ದ ಕ.ಶಿ. ವಿಶ್ವನಾಥ ಅವರ ಸಂಬಂಧಿಕರ ಹೋಟೆಲ್ ನಲ್ಲಿ ಊರಿನ ಶುಚಿ ರುಚಿ ದೋಸೆ ಸಾಂಬಾರ್ ಸವಿಯುವ ಅವಕಾಶ ಬಂತು. ಉತ್ತರ ಪ್ರದೇಶದ ಕರಸೇವಕರ ಭಾತೃತ್ವದ ಸವಿ ನಮಗೆ ದೊರೆಯಿತು. ಬೆಂಗಳೂರಿನಲ್ಲಿ ಕೂಡ ಕರಸೇವಕರಾದ ನಮಗೆ ಊರ ಮಂದಿಯಿಂದ ಆಹಾರ, ವಸತಿ ಸಹಕಾರ ದೊರಕಿದ್ದವು. ಮರ್ಯಾದಾ ಪುರುಷೋತ್ತಮ ಮಂದಿರದ ಉದ್ಘಾಟನೆ ಖುಷಿ ಕೊಟ್ಟಿದೆ. ಮಂದಿರ ಉದ್ಘಾಟನೆ ಬಳಿಕ ಮುಂದೆ ಅವಕಾಶ ಸಿಕ್ಕಿದರೆ ಮಂದಿರದ ದರ್ಶನ ಮಾಡುವ ಆಸೆ ಇದೆ ಎಂದು ಗೋಕುಲದಾಸ ಶೆಣೈ ಮಾತು ಮುಗಿಸಿದರು.

- Advertisement -

Related news

error: Content is protected !!