Thursday, July 23, 2026
spot_imgspot_img
spot_imgspot_img

ಲೆಬನಾನ್, ಗಾಝಾದಲ್ಲಿ ನಾಗರಿಕರನ್ನು ಗುರಿಯಾಗಿಸಿದರೆ ತೀವ್ರ ದಾಳಿ: ಇಸ್ರೇಲ್‍ಗೆ ಇರಾನ್ ಎಚ್ಚರಿಕೆ

- Advertisement -
- Advertisement -

ಟೆಹ್ರಾನ್: ಲೆಬನಾನ್ ಮತ್ತು ಗಾಝಾದಲ್ಲಿ ನಾಗರಿಕರ ಮೇಲೆ ದಾಳಿ ಮುಂದುವರಿದರೆ ಇಸ್ರೇಲ್ ಮೇಲೆ ಡೋನ್ ಹಾಗೂ ಕ್ಷಿಪಣಿಗಳ ಸುರಿಮಳೆಗರೆಯುವುದಾಗಿ ಇರಾನ್‌ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್(IRGC) ಮಂಗಳವಾರ ಎಚ್ಚರಿಕೆ ನೀಡಿದೆ.’ಇಸ್ರೇಲ್ ಆಡಳಿತದ ಕ್ರಿಮಿನಲ್ ಸೇನೆಗೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ: ಲೆಬನಾನ್ ಮತ್ತು ಪೆಲೆಸ್ತೀನಿಯನ್ ನಾಗರಿಕರ ವಿರುದ್ಧದ ಅಪರಾಧ ಮುಂದುವರಿದರೆ, ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶ, ಗಾಝಾ ಪಟ್ಟಿಯಲ್ಲಿರುವ ಶತ್ರು ಪಡೆಗಳ ನೆಲೆಗಳು ಭಾರೀ ಕ್ಷಿಪಣಿ ಮತ್ತು ಡೋನ್ ದಾಳಿಗೆ ಗುರಿಯಾಗಲಿವೆ’ ಎಂದು IRGC ಹೇಳಿಕೆ ತಿಳಿಸಿದೆ.ಸೋಮವಾರ ತಡರಾತ್ರಿ ಲೆಬನಾನ್‌ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ.

ಎಚ್ಚರಿಕೆ ನೀಡದೆ ಜನವಸತಿ ಪ್ರದೇಶದ ಮೇಲೆ ಇಸ್ರೇಲ್ ಪಡೆ ದಾಳಿ ನಡೆಸಿದೆ ಎಂದು ಲೆಬನಾನ್‌ನ ಆರೋಗ್ಯ ಇಲಾಖೆ ಹೇಳಿದೆ.ಇರಾನ್‌ನ ಇಂಧನ ಸೌಲಭ್ಯಗಳ ಮೇಲೆ ದಾಳಿ:ಇರಾನ್‌ನ ಇಚ್ಛೆಹಾನ್ ಪ್ರಾಂತ ಮತ್ತು ನೈಋತ್ಯ ನಗರವಾದ ರಮ್‌ಶಹರಲ್ಲಿ ಇಂಧನ ಸಂಬಂಧಿತ ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿರುವುದಾಗಿ ಇರಾನ್‌ನ ಫಾರ್ಸ್‌ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.ಇಸ್ಸಹಾನ್‌ನಲ್ಲಿ ಅನಿಲ(ಗ್ಯಾಸ್) ಮೂಲಸೌಕರ್ಯ ಹಾಗೂ ಸಮೀಪದ ಮನೆಗಳಿಗೆ ಹಾನಿಯಾಗಿದೆ. ಋmಗ್ರಮ್‌ಶಹರಲ್ಲಿ ವಿದ್ಯುತ್‌ ಸ್ಥಾವರಕ್ಕೆ ಸಂಪರ್ಕ ಕಲ್ಪಿಸುವ ಗ್ಯಾಸ್ ಪೈಪ್‌ಲೈನ್‌ನ ಸಮೀಪ ದಾಳಿ ನಡೆದಿದೆ. ಯಾವುದೇ ಸಾವು-ನೋವಿನ ಮಾಹಿತಿಯಿಲ್ಲ ಎಂದು ವರದಿ ಹೇಳಿದೆ.

- Advertisement -

Related news

error: Content is protected !!