Friday, April 19, 2024
spot_imgspot_img
spot_imgspot_img

ಡ್ರಗ್ಸ್​ ಸೇವಿಸಿ ವರದಕ್ಷಿಣೆಗಾಗಿ ಹೆಂಡತಿಗೆ ಕಿರುಕುಳ -ಐಟಿ ಕಂಪನಿ ಉದ್ಯೋಗಿ ಮೇಲೆ ದೂರು ದಾಖಲು

- Advertisement -G L Acharya panikkar
- Advertisement -

ಬೆಂಗಳೂರು: ಇತ್ತೀಚೆಗೆ ವರದಕ್ಷಿಣೆ ಕಿರುಕುಳ ಪ್ರಕರಣಗಳು  ಹೆಚ್ಚಾಗಿ ಕಂಡುಬರುತ್ತಿವೆ. ಕೋರಮಂಗಲದಲ್ಲಿ ಐಟಿ ಕಂಪನಿ ಉದ್ಯೋಗಿಯೊಬ್ಬ ತನ್ನ ಹೆಂಡತಿಗೆ ಕಿರುಕುಳ ನೀಡಿದ್ದಾನೆ. ಅದೂ ಸಹ ಮದ್ಯದ ಜೊತೆಗೆ ಡ್ರಗ್ಸ್​ ಸೇವಿಸಿ. ತನ್ನ ಪತ್ನಿ ಎದುರಲ್ಲೇ ಮಾದಕವಸ್ತು ಸೇವನೆ ಮಾಡಿ ವರದಕ್ಷಿಣೆ ತರುವಂತೆ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ತನ್ನ ಡ್ರಗ್​ ಚಟವನ್ನು ಹೆಂಡತಿಗೆ ವಿಡಿಯೋ ಮಾಡುವಂತೆ ಹೇಳಿ ವಿಕೃತಿಯನ್ನೂ ಮೆರೆದಿದ್ದಾನೆ. ಗಂಡನ ಮಾತಿಗೆ ಹೆದರಿದ ಹೆಂಡತಿ ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದಾಳೆ.  ಟೆಕ್ಕಿ ತನ್ನ ಮೊಬೈಲ್​ ಮೇಲೆ ಡ್ರಗ್ಸ್​​ ಹಾಕಿಕೊಂಡು ಸೇವಿಸುತ್ತಿದ್ದ ದೃಶ್ಯ ಹೆಂಡತಿಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಕೋರಮಂಗಲದ ಲೋಹಿತ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಈತ ಐಟಿ ಕಂಪನಿಯ ಉದ್ಯೋಗಿ ಎಂದು ತಿಳಿದು ಬಂದಿದೆ.  ಡ್ರಗ್ಸ್​ ಸೇವನೆ ಜೊತೆಗೆ ಆತ ತನ್ನ ಹೆಂಡತಿಗೆ ಮಾದಕ ವಸ್ತುವಿನ ಬಗ್ಗೆ ವಿವರಣೆ ಕೊಡುತ್ತಿದ್ದ ಎನ್ನಲಾಗಿದೆ. ಆರೋಪಿ ಲೋಹಿತ್ ಥಣಿಸಂದ್ರ ಬಳಿ ಕೊಕೈನ್​​ನ್ನು ತರುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಇನ್ನು ಗಂಡನ ಕಿರುಕುಳದ ವಿರುದ್ದ ಪತ್ನಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!