Saturday, May 4, 2024
spot_imgspot_img
spot_imgspot_img

ಮಗುವಿಗೆ ಹೆಸರಿಡುವ ವಿಚಾರಕ್ಕೆ ನಾಲ್ಕು ವರ್ಷದಿಂದ ಕಿತ್ತಾಟ; ಗಲಾಟೆ ನೋಡಿ ಹೈಕೋರ್ಟ್‌ನಿಂದಲೇ ಮಗುವಿಗೆ ನಾಮಕರಣ!

- Advertisement -G L Acharya panikkar
- Advertisement -

ಗಂಡ-ಹೆಂಡತಿ ಜಗಳಲ್ಲಿ ಕೂಸು ಬಡವಾಯಿತು ಅನ್ನೋ ಹಾಗೆ, ಮಗುವಿನ ಹೆಸರಿಡುವ ವಿಚಾರದಲ್ಲಿ ತಂದೆ-ತಾಯಿ ಮಧ್ಯೆ ಒಮ್ಮತ ಮೂಡದಿದ್ದಕ್ಕೆ ಅಂತಿಮವಾಗಿ ನ್ಯಾಯಾಲಯವೇ ನಾಮಕರಣ ಮಾಡಿದ ಅಪರೂಪದ ಪ್ರಸಂಗ ನಡೆದಿದೆ.

ಕೇರಳದ ದಂಪತಿಗೆ ಫೆಬ್ರವರಿ 12, 2020ರಲ್ಲಿ ಮಗು ಜನಿಸಿತ್ತು. ಮಗು ಹುಟ್ಟಿದ ಬೆನ್ನಲ್ಲೇ ದಂಪತಿ ಪ್ರತ್ಯೇಕವಾಗಿ ವಾಸಿಸಲು ಶುರುಮಾಡಿತ್ತು. ಪರಿಣಾಮ ಮಗು ಅಮ್ಮನ ಆಶ್ರಯ ಪಡೆದಿತ್ತು. ಇಬ್ಬರು ಗಂಡ-ಹೆಂಡತಿಯ ಕಿತ್ತಾಟದಿಂದಾಗಿ ನಾಲ್ಕು ವರ್ಷ ಆಗುತ್ತ ಬಂದರೂ ಮಗುವಿಗೆ ನಾಮಕರಣ ಮಾಡಿರಲಿಲ್ಲ.
ನಾಮಕರಣ ವಿಚಾರದಲ್ಲಿ ಇಬ್ಬರಿಗೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ, ಮಗುವಿನ ತಾಯಿ ಕೊನೆಗೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೋರ್ಟ್‌ ಗಂಡ-ಹೆಂಡತಿ ಇಬ್ಬರನ್ನೂ ಮನವೊಲಿಸುವ ಪ್ರಯತ್ನ ಮಾಡಿದೆ. ಆದರೆ ಅದು ಫಲಿಸದಿದ್ದಾಗ, ಮಗುವಿಗೆ ಪುಣ್ಯ ಎಂದು ಕೋರ್ಟ್ ನಾಮಕರಣ ಮಾಡಿದೆ.

ಪೇರೆಂಟ್ಸ್ ಪೇಟ್ರಿ ಏ ಕಾಯ್ದೆ ಪ್ರಕಾರ, ಕೋರ್ಟ್ ಮಗುವಿಗೆ ಹೆಸರನ್ನು ಸೂಚಿಸುತ್ತದೆ ಎಂದು ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್ ಅಭಿಪ್ರಾಯಪಟ್ಟರು. ಕೊನೆಗೆ ಮಗುವಿಗೆ ಪುಣ್ಯ ಎಂದು ನಾಮಕರಣ ಮಾಡಿ, ತಂದೆ ಉಪನಾಮವನ್ನು ಸೇರಿಸಲು ಸೂಚಿಸಿದೆ.

- Advertisement -

Related news

error: Content is protected !!