Saturday, May 18, 2024
spot_imgspot_img
spot_imgspot_img

ಬಂಟ್ವಾಳ: ಜಮೀಯ್ಯತುಲ್ ಫಲಾಹ್ ವಾರ್ಷಿಕ ಮಹಾಸಭೆ

- Advertisement -G L Acharya panikkar
- Advertisement -

ಬಂಟ್ವಾಳ: ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವಾರ್ಷಿಕ ಮಹಾಸಭೆಯು ಮೆಲ್ಕಾರ್ ಎಂ.ಎಚ್. ಕಂಪೌಂಡ್ ನಲ್ಲಿ ಸೋಮವಾರ ನಡೆಯಿತು.
ಸಭೆಯು ಅಧ್ಯಕ್ಷತೆ ವಹಿಸಿದ್ದ ಘಟಕಾದ್ಯಕ್ಷ ಹಾಜಿ ಎ. ಉಸ್ಮಾನ್ ಕರೋಪಾಡಿಯವರು ಮಾತನಾಡಿ ಕಳೆದ ಮೂರು ದಶಕಗಳಿಂದ ಬಡ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ನೀಡುತ್ತಾ ಬಂದಿರುವ ವಿಧ್ಯಾರ್ಥಿ ವೇತನವನ್ನು ಯಾವುದೇ ಕಾರಣಕ್ಕೂ ಮೊಟಕು ಗೊಳಿಸದೇ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವರ ಸಹಕಾರ ಅತೀ ಅಗತ್ಯ ಎಂದರು.

ಸಂಸ್ಥೆಯ ಎನ್ನಾರ್ಸಿಸಿ ಪ್ರತಿನಿಧಿ ಪರ್ವೇಝ್ ಅಲಿ ಮಂಗಳೂರು ಹಾಗೂ ಮಂಗಳೂರು ಘಟಕದ ಕಾರ್ಯದರ್ಶಿ ಅಹ್ಮದ್ ಕುಂಞಿ ಮಾಸ್ಟರ್ ವೀಕ್ಷಕರಾಗಿ ಭಾಗವಹಿಸಿದ್ದರು. ಜಮೀಯ್ಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಫಝಲ್ ರಹೀಂ ಉಪಸ್ಥಿತರಿದ್ದರು
ಕಾರ್ಯದರ್ಶಿ ಎಂ.ಎಚ್. ಇಕ್ಬಾಲ್ 2020-21ನೇ ಸಾಲಿನ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಎಫ್.ಎಂ. ಬಶೀರ್ ಫರಂಗಿಪೇಟೆ ಲೆಕ್ಕಪತ್ರ ಮಂಡಿಸಿದರು.

ಇದೇ ವೇಳೆ ಸಂಸ್ಥೆಯ ಅಜೀವ ಸದಸ್ಯರಾದ ವಿ.ಎಚ್. ಅಶ್ರಫ್ ವಿಟ್ಲ, ಶೇಖ್ ರಹ್ಮತುಲ್ಲಾ ಕಾವಳಕಟ್ಟೆ ಹಾಗೂ ಶುಕೂರ್ ಹಾಜಿ ಡಿ.ಪಿ.ಅವರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಹಾಜಿ ಎ. ಉಸ್ಮಾನ್ ಕರೋಪಾಡಿ, ಉಪಾಧ್ಯಕ್ಷರುಗಳಾಗಿ ರಶೀದ್ ವಿಟ್ಲ, ಬಿ.ಎಂ.ಅಬ್ಬಾಸ್ ಅಲಿ, ಕಾರ್ಯದರ್ಶಿಯಾಗಿ ಎಂ.ಎಚ್. ಇಕ್ಬಾಲ್, ಜೊತೆ ಕಾರ್ಯದರ್ಶಿ ಯಾಗಿ ಅಬ್ದುಲ್ ರಝಾಕ್ ಅನಂತಾಡಿ, ಕೋಶಾಧಿಕಾರಿ ಯಾಗಿ ಎಫ್.ಎಂ.ಬಶೀರ್ ಫರಂಗಿಪೇಟೆ, ಪತ್ರಿಕಾ ಕಾರ್ಯದರ್ಶಿಯಾಗಿ ಸುಲೈಮಾನ್ ಸೂರಿಕುಮೇರು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಲತೀಫ್ ನೇರಳಕಟ್ಟೆ ಅವರನ್ನು ಮುಂದುವರಿಸಲಾಯಿತು.
ರಶೀದ್ ವಿಟ್ಲ ಸ್ವಾಗತಿಸಿ, ಸುಲೈಮಾನ್ ಸೂರಿಕುಮೇರು ವಂದಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!