Saturday, April 20, 2024
spot_imgspot_img
spot_imgspot_img

ವಿಟ್ಲ: ಜ.26 – 27 ರಂದು ಶ್ರೀ ಮಹಮ್ಮಾಯಿ ಅಮ್ಮನವರು ಮತ್ತು ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಾರಿಪೂಜೆ

- Advertisement -G L Acharya panikkar
- Advertisement -

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರು ಮತ್ತು ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಾರಿಪೂಜೆಯು ಜ. 26 ಹಾಗೂ ಜ.27 ರಂದು ನಡೆಯಲಿದೆ.

vtv vitla

ವೇದಮೂರ್ತಿ ಕುಂಟುಕುಡೇಲು ಕೆ. ರಘುರಾಮ ತಂತ್ರಿವರ್ಯರ ನೇತೃತ್ವದಲ್ಲಿ ಶ್ರೀ ಅಮ್ಮನವರು ಮತ್ತು ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಡೆಯಲಿದೆ.

ಜ27ರಂದು ಸಭಾಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಎಸ್ ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 7 ಗಂಟೆಗೆ – ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ನಿರ್ದೇಶನದ ಆರ್ ಕೆ. ಆರ್ಟ್ಸ್ ಚಿಣ್ಣರಮನೆ (ರಿ.) ವಿಟ್ಲ ಇವರಿಂದ ನೃತ್ಯ ಸಂಭ್ರಮ ಹಾಗೂ ಶ್ರೀದೇವಿ ಜಗದಾಂಬಿಕೆ (ನೃತ್ಯ ರೂಪಕ) ನಡೆಯಲಿದೆ.

ಕಾರ್ಯಕ್ರಮಗಳ ವಿವರ:
ಜ. 26ರಂದು ಸಂಜೆ 4:00 ಗಂಟೆಗೆ – ಹೊರೆಕಾಣಿಕೆ ಸಮರ್ಪಣೆ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇಲ್ಲಿಂದ, ಬೃಹತ್ ಮೆರವಣಿಗೆಯೊಂದಿಗೆ ಮಹಮ್ಮಾಯಿ ಸನ್ನಿಧಿಗೆ ಆಗಮಿಸಲಿದೆ. ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ ಪಂಚಕವ್ಯಾದಿ, ಸ್ಥಳಶುದ್ಧಿ.


ಸಂಜೆ 5:00 ಗಂಟೆಗೆ – ಶಿಲ್ಪಿಗಳಿಂದ ಶ್ರೀ ದೈವಸ್ಥಾನ ಕಟ್ಟೆಗಳ ಪರಿಗ್ರಹ, ಆಚಾರ್ಯಾದಿ ಋತ್ವಗ್ವರಣಿ, ಖನನಾದಿ ಸಪ್ತಶುದ್ಧಿ ಪ್ರಾಸಾದ ಶುದ್ಧಿ, ವಾಸ್ತು ಹೋಮ, ವಾಸ್ತು ಬಲಿ, ರಕ್ಷೋಘ್ನ ಹೋಮ, ಅಸ್ತ್ರಕಲಶಪೂಜೆ, ಅಸ್ತ್ರಕಲಶಾಧಿವಾಸಕ್ರಿಯೆ, ನೂತನ ಪೀಠ, ಆಯುಧ ಬಿಂಬಗಳ, ಜಲಾಧಿವಾಸ ಕ್ರಿಯೆಗಳು, ಧ್ಯಾನಾಧಿವಾಸ ಕ್ರಿಯೆಗಳು ಜರುಗಲಿದೆ.

ಜ.27ರಂದು ಬೆಳಗ್ಗೆ 7:00 ಗಂಟೆಗೆ- ಶ್ರೀ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಬ್ರಹ್ಮಕಲಶಪೂಜೆ, ಕಲಶಾಧಿವಾಸ ಹೋಮ, ಆಶ್ಲೇಷಾ ಬಲಿ, ವಟು ಆರಾಧನೆ.
ಬೆಳಗ್ಗೆ 10:08ರ ಮೀನಾ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರು ಹಾಗೂ ಸ- ಪರಿವಾರ ದೈವಗಳ ಪುನಃ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಶ್ರೀ ಚಂಡಿಕಾಯಾಗ, ಪೂರ್ಣಾಹುತಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

vtv vitla
vtv vitla

ವಿಶೇಷ ಸೇವೆಗಳು
ಅನ್ನದಾನ ಸೇವೆ- 2000
ಪ್ರಧಾನ ಕಲಶ ಸೇವೆ- 1000
ಕಲಶ ಸೇವೆ- 500
ಚಂಡಿಕಾ ಯಾಗ ಬಾಬ್ತು-250
ಹೂವಿನ ಪೂಜೆ-150

ವಾರ್ಷಿಕ ಮಾರಿ ಪೂಜೆಯ ಕಾರ್ಯಕ್ರಮಗಳು:
28.01.2022: ಗೊನೆ ಮುಹೂರ್ತ 03.02.2022: ಸಂಜೆ ಗಂಟೆ 6.00ಕ್ಕೆ ಭಂಡಾರ ತೆಗೆದು, ಮಾರಿಕಲಕ್ಕೆ ತೆರಳುವುದು 04.02.2022: ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ.

vtv vitla
vtv vitla
- Advertisement -

Related news

error: Content is protected !!