

ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬೆಳ್ಳಿಪ್ಪಾಡಿ ಕಿರುಷಷ್ಠಿ ಉತ್ಸವವು ಜ. 5 ನೇ ಆದಿತ್ಯವಾರದಿಂದ 6 ನೇ ಸೋಮವಾರದವರೆಗೆ ನಡೆಯಲಿದೆ.

ದಿನಾಂಕ: 5-1-2025ನೇ ಆದಿತ್ಯವಾರ ಬೆಳಿಗ್ಗೆ 10:00ಕ್ಕೆ ಶ್ರೀ ಮಹಾಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ, ನವಕ ಕಳಸ ನಡೆಸದು ಬಳಿಕ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ರಂಗಪೂಜೆ ಹಾಗೂ ಕಿರುಷಷ್ಠಿ ಉತ್ಸವ ಬಲಿ ಮತ್ತು ಕಟ್ಟೆ ಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 10:00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ನಾಗ ಮಾಣಿಕ್ಯ ಎಂಬ ಚಾರಿತ್ರಿಕ ನಾಟಕ ನಡೆಯಲಿದೆ.

ದಿನಾಂಕ: 6 -1-2025ನೇ ಸೋಮವಾರ ಬೆಳಿಗ್ಗೆ 9:00ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ಬಳಿಕ ಮಹಾಪೂಜೆ, ಮಹಾ ಅನ್ನಸಂತರ್ಪಣೆ ಹಾಗೂ ಕೂಟೇಲಿನಿಂದ ಭಂಡಾರ ಬಂದು ಹುಲಿಚಾಮುಂಡಿ ನೇಮ ನಡೆಯಲಿದೆ.

ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ಉತ್ಸವದ ಪ್ರಯುಕ್ತ ಜ. 4ನೇ ಶನಿವಾರ ಸಾಯಂಕಾಲ 4:00 ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ದೇವಸ್ಥಾನ ಮತ್ತು ಬೆಳ್ಳಿಪ್ಪಾಡಿ ಶ್ರೀ ಆದಿ ಮೊಗೇರ್ಕಳ ದೈವಸ್ಥಾನದಿಂದ ಶ್ರೀ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯೊಂದಿಗೆ ಹಸಿರು ಹೊರಕಾಣಿಕೆ ಹೊರಡಲಿರುವುದು.
ದಿನಾಂಕ: 14-1-2025ನೇ ಮಂಗಳವಾರ ಮಕರ ಸಂಕ್ರಮಣದಂದು ಬೆಳ್ಳಿಪ್ಪಾಡಿ ಜತ್ತಿಬೆಟ್ಟು ಎಂಬಲ್ಲಿರುವ ಪುರಾತನ ವನಶಾಸ್ತವು (ಅಯ್ಯಪ್ಪ) ಪೂಜೆ ನಡೆಯಲಿದೆ.
ದಿನಾಂಕ 16-12-2024 ನೇ ಸೋಮವಾರದಿಂದ 14-1-2025ನೇ ಮಂಗಳವಾರದವರೆಗೆ ಪ್ರತಿ ದಿನ ಬೆಳಿಗ್ಗೆ 5:00ಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧನು ಪೂಜೆ ನಡೆಯಲಿದೆ.
