Sunday, June 7, 2026
spot_imgspot_img
spot_imgspot_img

ಜನಾರ್ಧನ ರೆಡ್ಡಿಗೆ ಕೋವಿಡ್ ಸೋಂಕು ದೃಢ:  ಸಚಿವ ಶ್ರೀರಾಮುಲು ಮನೆ ಭೇಟಿ ರದ್ದು.

- Advertisement -
- Advertisement -

ಬಳ್ಳಾರಿ:- ಮಾಜಿ ಸಚಿವ ಜಿ.ಜನಾರ್ಧನ ರೆಡ್ಡಿಯವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಭಾನುವಾರ ಅವರು ಬಳ್ಳಾರಿಗೆ ಆಗಮಿಸಬೇಕಿದ್ದ ಕಾರ್ಯಕ್ರಮ ರದ್ದಾಗಿದೆ. ಈ ಕುರಿತು ಜನಾರ್ಧನ ರೆಡ್ಡಿಯವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಖಚಿತ ಪಡಿಸಿದ್ದಾರೆ.

ಸಧ್ಯ ಬೆಂಗಳೂರಿನಲ್ಲಿರುವ ಜನಾರ್ಧನ ರೆಡ್ಡಿಯವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.ಈ ಬಗ್ಗೆ  ರೆಡ್ಡಿಯವರು ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದಾರೆ. ನಾನು ನಾಳೆ ಬಳ್ಳಾರಿಗೆ ಭೇಟಿ ನೀಡಬೇಕಿತ್ತು. ನಾಳೆ ನನ್ನ ಪ್ರಾಣ ಸ್ನೇಹಿತ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ತಾಯಿಯ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಇಂದು ನನಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದ್ದರಿಂದ ಬಳ್ಳಾರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಬರೆದಿದ್ದಾರೆ.

- Advertisement -

Related news

error: Content is protected !!