Saturday, April 27, 2024
spot_imgspot_img
spot_imgspot_img

ವಿಟ್ಲ : (ಜನವರಿ 13) ದ. ಕ. ಜಿ. ಪಂ. ಉ. ಹಿ. ಪ್ರಾ. ಶಾಲೆ ದೇಲಂತಬೆಟ್ಟುನಲ್ಲಿ “ಅಮೃತ ಸಿಂಚನ” ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ : ದಿನಾಂಕ : 13-01-2024ನೇ ಶನಿವಾರ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದಿನೇಶ್ ಗುಂಡೂರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಕರ್ನಾಟಕ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಲಿರುವರು. ರಾಜೇಶ್ ನಾಯ್ಕ ಯು. ಮಾನ್ಯ ಶಾಸಕರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇವರ ಸಭಾಧ್ಯಕ್ಷತೆಯಲ್ಲಿ ನಡೆಯುವ ಈ ಸಭಾ ಕಾರ್ಯಕ್ರಮದಲ್ಲಿ, ವೇದಿಕೆಯಲ್ಲಿ ಮಧು ಬಂಗಾರಪ್ಪ ಎಸ್. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರಕಾರ ಗೌರವ ಉಪಸ್ಥಿತಿಯಲ್ಲಿರುವರು ಹಾಗೂ ಯು. ಟಿ. ಖಾದರ್ ಫರೀದ್ ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ ಘನ ಉಪಸ್ಥಿತಿಯಲ್ಲಿರುವರು.

ನಳಿನ್ ಕುಮಾರ್ ಕಟೀಲ್ ಸಂಸದರು, ಲೋಕಸಭೆ, ದಕ್ಷಿಣ ಕನ್ನಡ ಜಿಲ್ಲೆ ಸನ್ಮಾನ್ಯ ಡಿ. ವೀರೇಂದ್ರ ಹೆಗ್ಗಡೆ ಸಂಸದರು, ರಾಜ್ಯಸಭೆ, ಕೋಟ ಶ್ರೀನಿವಾಸ ಪೂಜಾರಿ ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್, ಬಿ. ಎಂ. ಫಾರೂಕ್ ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್ , ಕೆ. ಹರೀಶ್ ಕುಮಾರ್ ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್ , ಎಸ್. ಎಲ್. ಭೋಜೇಗೌಡ ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್ , ಪ್ರತಾಪಸಿಂಹ ನಾಯಕ್ ಕೆ. ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್, ಮಂಜುನಾಥ ಭಂಡಾರಿ ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

“ಅಮೃತ ಸಿಂಧು” ಪುಟಾಣಿಗಳ ಹಬ್ಬ ಕಾರ್ಯಕ್ರಮವು ಪೂರ್ವಾಹ್ನ ಗಂಟೆ 10.00ಕ್ಕೆ ಎಮ್. ಅಪೂರ್ವ ಅನಂತರಾವ್ (ಶಾಲಾ ಕಟ್ಟಡಗಳಿಗೆ ಸ್ಥಳ ದಾನ ಮಾಡಿದವರು) ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆ ನಡೆಯಲಿರುವುದು, ವೇದಿಕೆಯಲ್ಲಿ ಸಾದ್ವಿ ಶ್ರೀ ಶ್ರೀ ಮಾತಾನಂದಮಯಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಗೌರವ ಉಪಸ್ಥಿತಿಯಲ್ಲಿರುವರು ಹಾಗೂ ಬಿ. ಕೆ. ಇಬ್ರಾಹಿಂ SDMC ಅಧ್ಯಕ್ಷರು, ದೇಲಂತಬೆಟ್ಟು ಶಾಲೆ ಭಾಗವಹಿಸಲಿರುವರು.

ಅಂಗನವಾಡಿ ಮತ್ತು ಶಾಲಾ ಪುಟಾಣಿಗಳಿಂದ “ಸಾಂಸ್ಕೃತಿಕ ವೈಭವ” ನಡೆಯಲಿರುವುದು.

ಅಪರಾಹ್ನ ಗಂಟೆ 2.00ರಿಂದ “ಅಮೃತ ಸಾರ್ಥಕ್ಯ ಸಂಭ್ರಮ” ಕಾರ್ಯಕ್ರಮವು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಪೂಜ್ಯರ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆಗೊಂಡು ನಡೆಯಲಿರುವುದು, ಪ್ರಧಾನ ಅತಿಥಿಗಳಾಗಿ ಡಾ| ಚಿನ್ನಪ್ಪ ಗೌಡ ವಿಶ್ರಾಂತ ಕುಲಪತಿಗಳು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಹಾವೇರಿ ಹಿರಿಯ ಜಾನಪದ ತಜ್ಞರು ಭಾಗವಹಿಸಲಿರುವರು.
ವಂದನೀಯ ಫಾದರ್ ಸುನೀಲ್ ಪ್ರವೀಣ ಪಿಂಟೊ ಧರ್ಮಗುರುಗಳು, ಸಂತ ಪೌಲರ ದೇವಾಲಯ, ದೇಲಂತಬೆಟ್ಟು , ಅಬೂಬಕ್ಕರ್ ಸಿದ್ದೀಕ್ ಮೊಂಟುಗೋಳಿ ಕಾರ್ಯದರ್ಶಿ, ಸುನ್ನೀ ಯುವಜನ ಸಂಘ, ಕರ್ನಾಟಕ ರಾಜ್ಯ ಇವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ನಡೆಯಲಿರುವುದು.

ಸಂಜೆ ಗಂಟೆ 4.00ರಿಂದ “ಗುರುವಂದನೆ ಮತ್ತು ಸಾಧಕರಿಗೆ ಸನ್ಮಾನ” ನಡೆಯಲಿರುವುದು, ಸಂಜೆ ಗಂಟೆ 5.00ರಿಂದ ‘ಅಮೃತ ಧಾರೆ’ “ಸಾಂಸ್ಕೃತಿಕ ಸೌರಭ” ಶಾಲಾ ಮಕ್ಕಳು ಮತ್ತು ಹಿರಿಯ ವಿದ್ಯಾರ್ಥಿಗಳಿಂದ ನಡೆಯಲಿದೆ.

ರಾತ್ರಿ ಗಂಟೆ 8.00ರಿಂದ : “ಕಲಾ ರಸಿಕರಿಗೊಂದು ರಸದೌತಣ” ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ (ರಿ.) ಅಭಿನಯಿಸುವ ತುಳು ಸಾಮಾಜಿಕ ನಾಟಕ “ಕಥೆ ಎಡ್ಡೆಂಡು”

- Advertisement -

Related news

error: Content is protected !!