Saturday, April 20, 2024
spot_imgspot_img
spot_imgspot_img

ಜಪಾನ್ ಪ್ರಧಾನಮಂತ್ರಿ ಶಿಂಝೋ ಅಬೆ ರಾಜೀನಾಮೆ

- Advertisement -G L Acharya panikkar
- Advertisement -

ಟೋಕಿಯೋ: ಜಪಾನ್ ಪ್ರಧಾನಮಂತ್ರಿ ಶಿಂಝೋ ಅಬೆ ಇಂದು ರಾಜೀನಾಮೆ ನೀಡಿದ್ದಾರೆ. ಅನಾರೋಗ್ಯ ಹಿನ್ನಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

65 ವರ್ಷ ಪ್ರಾಯದ ಶಿಂಝೋ ಅಬೆ ಅವರು ಅಲ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅನಾರೋಗ್ಯ ಕಾರಣ ನೀಡಿ ಅವರು ರಾಜೀನಾಮೆ ನೀಡಿದ್ದಾರೆ.

ಇನ್ನು ಶಿಂಜೋ ಅಬೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ ಜಪಾನ್ ಷೇರು ಮಾರುಕಟ್ಟೆ ಪಾತಾಳಕ್ಕೆ ಕುಸಿದಿದೆ. ಬೆಂಚ್ ಮಾರ್ಕ್ ನಿಕ್ಕಾಯ್ ಶೇ.2.21 ರಷ್ಟು ಕುಸಿದು, 22,717.02ಕ್ಕೆ ತಲುಪಿದೆ.

- Advertisement -

Related news

error: Content is protected !!