Thursday, July 3, 2025
spot_imgspot_img
spot_imgspot_img

ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿಯ ಕಾಲಾವಧಿ ಜಾತ್ರೋತ್ಸವ

- Advertisement -
- Advertisement -

ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿಯ ಕಾಲಾವಧಿ ಜಾತ್ರೋತ್ಸವ ಡಿ.31 ಮತ್ತು ಜ.01 ರಂದು ಕುಂಟುಕುಡೇಲು ರಾಘರಾಮ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.ಡಿ.31 ರಂದು ಬೆಳಿಗ್ಗೆ 8:30 ಗಂಟೆಗೆ ಗಣಪತಿ ಹೋಮ,ನಾಗತಂಬಿಲ ಬೆಳಿಗ್ಗೆ 11 ಗಂಟೆಗೆ ಕಲಶಾಭಿಷೇಕ ಮಧ್ಯಾಹ್ನ 12 ಗಂಟೆಗೆ ತುಲಾಭಾರ ಸೇವೆ,ಮಹಾಪೂಜೆ ಅನ್ನಸಂತರ್ಪಣೆ ಅಪರಾಹ್ನ 5 ಗಂಟೆಗೆ ರಂಗಪೂಜೆ,ದುರ್ಗಾಪೂಜೆ,ಉತ್ಸವಬಲಿ,ರಾತ್ರಿಪೂಜೆ ಅನ್ನಸಂತರ್ಪಣೆ ಸಂಜೆ 7 ಗಂಟೆಯಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ನೂತನ ಪ್ರಸಂಗ ಯಕ್ಷಗಾನ ಬಯಲಾಟ ನಡೆಯಲಿದೆ.ಜ. 01 ರಂದು ಬೆಳಿಗ್ಗೆ 7 ಗಂಟೆಯಿಂದ ಭೂತಬಲಿ,ದರ್ಶನ ಬಲಿ,ರಾಜಾಂಗಣ ಪ್ರಸಾದ,ಬೆಳಿಗ್ಗೆ ಪೂಜೆ,ಮಧ್ಯಾಹ್ನ ಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ಅಪರಾಹ್ನ 5 ಗಂಟೆಯಿಂದ ಕಲಶ ಪೂರಣೆ,ಪೇಟೆ ಸವಾರಿ,ಶುದ್ಧ ಕಲಶಾಭಿಷೇಕ, ರಾತ್ರಿ ಪೂಜೆ ರಾತ್ರಿ 10 ಗಂಟೆಯಿಂದ ಮಂತ್ರಾಕ್ಷತೆ ಅನ್ನಸಂತರ್ಪಣೆ ಹಾಗೂ ರಾತ್ರಿ 7 ಗಂಟೆಯಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ವಿಟ್ಲದ ರಥದ ಗದ್ದೆಯಲ್ಲಿ ನಡೆಯಲಿದೆ.

- Advertisement -

Related news

error: Content is protected !!