Sunday, May 19, 2024
spot_imgspot_img
spot_imgspot_img

ನೆದರ್ಲೆಂಡ್​ ಮಹಿಳೆಯ ಮನಸ್ಸು ಗೆದ್ದ ಜಯಾ; ವಿದೇಶಕ್ಕೆ ಹಾರಲು ಬೀದಿನಾಯಿಗೆ ಪಾಸ್​​​ಪೋರ್ಟ್​, ವೀಸಾ ರೆಡಿ.!!

- Advertisement -G L Acharya panikkar
- Advertisement -
vtv vitla

ವಾರಣಾಸಿಯ ಜಯಾ ಎಂಬ ಶ್ವಾನಕ್ಕೆ ಮನಸೋತ ನೆದರ್​ಲ್ಯಾಂಡ್​​ ಮೂಲದ ಮಹಿಳೆಯೊಬ್ಬರು ಅದನ್ನು ದತ್ತು ಪಡೆದು ವೀಸಾ, ಪಾಸ್​​ಪೋರ್ಟ್​ ಮಾಡಿಸಿ ವಿದೇಶಕ್ಕೆ ಕರೆದೊಯ್ಯಲು ಮುಂದಾಗಿದ್ದಾರೆ.

ಮೆರಲ್​ ಬೊಂಟೆನ್ಬೆಲ್​ ಎಂಬ ಆ್ಯಮ್​ಸ್ಟರ್​ಡ್ಯಾಂನ ಮಹಿಳೆ ವಾರಣಾಸಿಗೆ ಭೇಟಿ ನೀಡಿದಾಗ ಜಯಾ ಎಂಬ ಶ್ವಾನವನ್ನು ಕಂಡು ಅದರೊಂದಿಗೆ ನಿತ್ಯವೂ ಮಾತನಾಡುತ್ತಾ ಆಹಾರ ನೀಡಿದ್ದಾರೆ. ಹೀಗೆ ವಾರಣಾಸಿಯಲ್ಲಿ ಇದ್ದಷ್ಟು ದಿನ ಶ್ವಾನದ ಜೊತೆಗೆ ಮಹಿಳೆಗೆ ಆತ್ಮೀಯತೆ ಬೆಳೆದಿದೆ. ಕೊನೆಗೆ ಈ ಬೀದಿ ಶ್ವಾನವನ್ನು ಮೆರೆಲ್​ ತನ್ನೂರಿಗೆ ಕರೆದುಕೊಂಡು ಹೋಗಬೇಕೆಂದು ಮನಸ್ಸಾಗಿದೆ. ಅದಕ್ಕಾಗಿ ಏರ್ಪಾಡು ಕೂಡ ಮಾಡಿದ್ದಾರೆ.

ಜಯಾಳಿಗೋಸ್ಕರ ಮೆರೆಲ್​ ಸ್ಥಳೀಯಾಡಳಿತ ಜೊತೆಗೆ ಮಾತನಾಡಿ, ಅದಕ್ಕಾಗಿ ಪ್ರಮಾಣ ಪತ್ರ ರಚಿಸಿ ಅನುಮತಿ ಪಡೆದಿದ್ದಾರೆ. ನಾಯಿಯನ್ನ ದತ್ತು ಪಡೆಯುವ ಮೂಲಕ ವಿದೇಶಕ್ಕೆ ಕರೆದೊಯ್ಯಲು ಎಲ್ಲಾ ದಾಖಲೆಗಳನ್ನು ರೆಡಿ ಮಾಡಿಕೊಂಡಿದ್ದಾರೆ. ಜೊತೆಗೆ ನೆದರ್ಲೆಂಡ್​ನಿಂದಲೂ ಜಯಾಳಿಗಾಗಿ ವೀಸಾ ತರಿಸಿಕೊಂಡಿದ್ದಾರೆ.

ಆರು ತಿಂಗಳ ಸತತ ಪ್ರಯತ್ನದಿಂದ ಜಯಾಳನ್ನು ತಮ್ಮ ಮನೆಯ ಸದಸ್ಯರಲ್ಲಿ ಒಬ್ಬರನ್ನಾಗಿ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!