Thursday, May 9, 2024
spot_imgspot_img
spot_imgspot_img

ಪುತ್ತೂರು: ಜಯಕರ್ನಾಟಕ ಜನಪರ ವೇದಿಕೆಯ ಮೊದಲನೇ ವರ್ಷದ ವಾರ್ಷಿಕೋತ್ಸವ ಹಾಗೂ ಗಾಂಧಿಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮ

- Advertisement -G L Acharya panikkar
- Advertisement -
driving

ಪುತ್ತೂರು: ಜಯಕರ್ನಾಟಕ ಜನಪರ ವೇದಿಕೆಯು ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿ ಜನ್ಮ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೆರೆಯ ವಠಾರದಲ್ಲಿ ನಡೆಯಿತು.

ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿಯವರ ನೇತೃತ್ವದಲ್ಲಿ, ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಅಣ್ಣಪ್ಪ ಓಲೇಕಾರ ರವರ ಮಾರ್ಗದರ್ಶನದಲ್ಲಿ ಕಳೆದ ಒಂದು ವರ್ಷಗಳಿಂದ ರಾಜ್ಯದ ಮೂಲೆ ಮೂಲೆಯಲ್ಲೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. “ಮನೆಗೊಂದು ಮರ ಊರಿಗೊಂದು ಕೆರೆ” “ಜಯ ಕರ್ನಾಟಕ ಜನಪರ ವೇದಿಕೆಯ ನಡೆ ನಿಸರ್ಗದ ಕಡೆ” ಎಂಬ ಅಭಿಯಾನದಡಿಯಲ್ಲಿ ಒಂದೊಂದು ಕೆರೆಗಳ ಅಂಗಳದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು, ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸುವ ಮೂಲಕ ಗಾಂಧಿ ಜಯಂತಿ ಮತ್ತು ಜಯಕರ್ನಾಟಕ ಜನಪರ ವೇದಿಕೆಯ ಮೊದಲ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಿದರು.

ಕೆರೆ ನೈರ್ಮಲ್ಯ ಹಾಗೂ ಪರಿಸರ ಸಂರಕ್ಷಣೆಯ ಸಲುವಾಗಿ ಹಿರಿಯರಿಂದ ದೇವಸ್ಥಾನದ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಹಾಗೂ ಕೆರೆಯನ್ನು ಹಂತಹಂತವಾಗಿ ಶುಚಿತ್ವ ಮತ್ತು ಅಭಿವೃದ್ಧಿಗೊಳಿಸುವ ಬಗ್ಗೆ ಸ್ಥಳೀಯರಿಂದ ಅಭಿಪ್ರಾಯ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಕೆರೆ ಅಭಿವೃದ್ದಿಗೊಳಿಸುವ ಯೋಜನೆಯನ್ನು ಹಾಕಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಸದಾಶಿವ ರೈ ದಂಬೆಕಾನ ರವರು ಯುವ ಸಂಸ್ಥಾಪಕ ಅಧ್ಯಕ್ಷ ಗುಣರಂಜನ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಂಘಟನೆ ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಪುತ್ತೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಟನೆ ಇನ್ನಷ್ಟು ಬಲವರ್ಧನೆ ಆಗಲಿದೆ. ಯುವಕರ ಕಣ್ಮಣಿ ಗುಣರಂಜನ್ ಶೆಟ್ಟಿ ಅವರಿಗೆ ನಮ್ಮ ಜಿಲ್ಲೆಯ ಸಂಪೂರ್ಣ ಬೆಂಬಲ ಇದೆ ಎಂದು ಅಭಿಪ್ರಾಯಪಟ್ಟರು.

ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ ಕರ್ನಾಟಕ ಜನಪರ ವೇದಿಕೆಯು ಗುಣರಂಜನ್ ಶೆಟ್ಟಿ ನೇತೃತ್ವದಲ್ಲಿ ಜನಪರ ಕೆಲಸಗಳನ್ನು ಮಾಡುತ್ತದೆ ಅವರ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದರು. ಇದೊಂದು ಅದ್ಭುತ ಅರ್ಥಪೂರ್ಣ ಕಾರ್ಯಕ್ರಮ. ಶುದ್ಧ ಕುಡಿಯುವ ನೀರು ಶುದ್ಧ ಗಾಳಿ ಬೇಕು. ಊರಿನಲ್ಲಿ ಕೆರೆಯ ಅಭಿವೃದ್ದಿ ಪಡಿಸಿದಾಗ ಬೇರೆಯವರಿಗೂ ಮಾದರಿಯಾಗುತ್ತದೆ. ಗಾಂಧೀಜಿ 152ನೇ ಜನ್ಮದಿಚಾರಣೆ ಅಂಗವಾಗಿ ಇಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರೂ ಸಹ ಪ್ರೋತ್ಸಾಹ ನೀಡಬೇಕು. ಜಾತಿ ಧರ್ಮ ಮೀರಿ ಒಟ್ಟು ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಂಚಾಲಕ ರಾಮ್‌ದಾಸ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ವರ್ಷದ ಅವಧಿಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಸಾಧನೆಯ ಮಾಹಿತಿಗಳನ್ನು ತಿಳಿಸಿದರು. ಮನೆಗೊಂದು ಮರ ಊರಿಗೊಂದು ಕೆರೆ, ಜಯ ಕರ್ನಾಟಕ ಜನಪರ ವೇದಿಕೆ ನಡಿಗೆ ನಿಸರ್ಗದ ಕಡೆಗೆ ಎಂಬ ಶೀರ್ಷಿಕೆಯಲ್ಲಿ ಕಾರ್ಯನಿರ್ವಹಿಸಿದ್ದು ಸರಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟವರು ಮತ್ತು ಊರಿನವರು ನಮಗೆ ಅನುಮತಿ ಕೊಟ್ಟರೆ ಜಯ ಕರ್ನಾಟಕ ಜನಪರ ವೇದಿಕೆ ಈ ಕೆರೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಕಾರ್ಯವನ್ನು ಮಾಡುವ ಕೆಲಸವನ್ನು ನಾವು ಮಾಡುತ್ತೇವೆಂದು ಭರವಸೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ರಾಮ್‌ದಾಸ್ ಶೆಟ್ಟಿ ಅವರಿಗೆ ಕೆಯ್ಯೂರು ಗ್ರಾಮದ ಜನತೆಯ ಪರವಾಗಿ ಸನ್ಮಾನ ಮಾಡಲಾಯಿತು. ಈ ವೇಳೆ ದಿವಾಕರ್ ರೈ ಸಣ್ಣಂಗಳ, ಸಂತೋಷ್ ರೈ ಇಳಂತಾಜೆ, ಎ.ಕೆ ಜಯರಾಮ್ ರೈ, ಎಕೆ ಮೇರ್ಲ, ಲೋಕನಾಥ್ ಪಕ್ಕಳ, ಶಿಶಿರ್ ರೈ, ಅಶ್ವಿನ್ ರೈ, ಪೂಜಿತ್ ರೈ, ಶನ್ಮಿತ್ ರೈ, ಅಮರ್ ರೈ, ನವೀನ್ ರೈ ಕೈಕಾರ, ಸಮರ್ಥ್ ಭಂಡಾರಿ, ಶ್ಯಾಮ್ ಸುಂದರ್ ರೈ, ಅಮಂತು, ಮೋಹನ್ ಗೌಡ, ನಿತಿನ್ ರೈ ಕುಕ್ಕುವಳ್ಳಿ, ಸಮಿತ್, ರಘುನಾಥ್, ಸುನಿಲ್, ಸೋಮು, ಪ್ರದೀಪ್ ರೈ ಸಣ್ಣಂಗಳ, ಜಯಂತ್ ರೈ, ವಿಶ್ವನಾಥ ರೈ, ಬಾಬು ಪಾಟಾಳಿ, ಲೀಲಾವತಿ ರೈ, ತೌಫೀಕ್, ನಾಸಿರ್ ಸುಳ್ಯ ಘಟಕದ ಕಾರ್ತಿಕ್ ರೈ ,ಶ್ರೀಧರ್ ರೈ, ಅಮೃತ್ ಶೇಟ್, ಜೊತೆಗಿದ್ದರು.

ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಭಂಡಾರಿ, ಪಿಡಿಒ ಸುಬ್ರಹ್ಮಣ್ಯ ಕೆ ಎಂ, ಕಾರ್ಯದರ್ಶಿ ಸುರೇಂದ್ರ ರೈ, ಸದಸ್ಯೆ ಮೋಹಿನಿ ಅವರನ್ನು ಗೌರಪೂರ್ವಕವಾಗಿ ಸ್ವಾಗತಿಸಲಾಯಿತು.
ಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.

- Advertisement -

Related news

error: Content is protected !!