Friday, March 29, 2024
spot_imgspot_img
spot_imgspot_img

ಬೆನ್ನಿನ ತುರಿಕೆಗೆ ಜೆಸಿಬಿ ಯನ್ನು ಬಳಸಿಕೊಂಡ ಭೂಪ

- Advertisement -G L Acharya panikkar
- Advertisement -

ನಿಮಗೆ ತುರಿಕೆ ಕಾಣಿಸಿಕೊಂಡರೆ ಏನು ಮಾಡುತ್ತೀರಿ? ಎಂದರೆ ಸಹಜವಾಗಿ ನಮ್ಮ ಕೈ ಬಳಸಿ ತುರುಸಿಕೊಳ್ಳುತ್ತೇವೆ ಎಂಬುದೇ ಬಹತೇಕರ ಉತ್ತರವಾಗಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ತಾನು ಈ ವಿಷಯದಲ್ಲಿ ಎಲ್ಲರಿಗಿಂತ ಭಿನ್ನ ಎಂದು ಪ್ರೂವ್​ ಮಾಡಿದ್ದಾರೆ.

ತಮ್ಮ ಬೆನ್ನಿನಲ್ಲಿ ತುರಿಕೆ ಉಂಟಾಯಿತು ಅಂತ ಮಣ್ಣು ತೆಗೆಯಲು ಬಳಸುವ ದೈತ್ಯ ಜೆಸಿಬಿಯಿಂದ ತಮ್ಮ ಬೆನ್ನು ತುರಿಸಿಕೊಂಡಿದ್ದಾರೆ. ಹೌದು ನಿಮಗೆ ಅಚ್ಚರಿ ಎನ್ನಿಸಿದ್ರು ಇದು ಸತ್ಯ. ವ್ಯಕ್ತಿಯೊಬ್ಬರು ಜೆಸಿಬಿಯಿಂದ ಬೆನ್ನು ಉಜ್ಜಿಸಿಕೊಂಡ 41 ಸೆಕೆಂಡ್​ಗಳ ವಿಡಿಯೋ ಸದ್ಯ ನೆಟ್ಟಿಗರನ್ನು ನಗೆ ಗಡಲಿನಲ್ಲಿ ತೇಲಿಸುತ್ತಿದೆ.

ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಬೆನ್ನು ತುರಿಸಿಕೊಳ್ಳುವ ಸಲುವಾಗಿ ಜೆಸಿಬಿ ಮುಂದೆ ಬಾಗಿ ನಿಲ್ಲುತ್ತಾರೆ. ಇದಕ್ಕೆ ಪ್ರತಿಯಾಗಿ ಜೆಸಿಬಿಯ ಡ್ರೈವರ್​​ ಕೂಡ ಜೆಸಿಬಿಯ ಸೊಂಡಿಲಿನ ಹಲ್ಲುಗಳನ್ನು ಬಳಸಿ ವ್ಯಕ್ತಿಯ ಬೆನ್ನು ಉಜ್ಜಿದ್ದಾನೆ. ನಂತರ ಬಾಗಿ ನಿಂತಿದ್ದ ವ್ಯಕ್ತಿಗೆ ಚಮಕ್​ ನೀಡುವ ಜೆಸಿಬಿ ಡ್ರೈವರ್​ ಅದೇ ಜೆಸಿಬಿ ಸೊಂಡಿಲಿನಿಂದ ತಮಾಷೆಯಾಗಿ ವ್ಯಕ್ತಿಯನ್ನು ಮೇಲೆತ್ತಲು ಯತ್ನಿಸುತ್ತಾನೆ.


ವ್ಯಕ್ತಿ ಆ ಸೊಂಡಿಲಿನಿಂದ ತಪ್ಪಿಸಿಕೊಂಡು ನಗು ನಗುತ್ತಲೇ ತೆರಳುವ ವಿಡಿಯೋ ಸದ್ಯ ಸೋಷಿಯಲ್​ ಮಿಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

- Advertisement -

Related news

error: Content is protected !!