Friday, November 27, 2026
spot_imgspot_img
spot_imgspot_img

ಪ್ರಿಯತಮೆ ಮೇಲೆ ಅನುಮಾನ; ಚಾಕುವಿನಿಂದ ಇರಿದು ಪ್ರಿಯಕರನಿಂದ ಹತ್ಯೆ

- Advertisement -
- Advertisement -

ಬೆಂಗಳೂರು : ಪ್ರಿಯತಮೆಗೆ ಬೇರೆ ಯುವಕನ ಜೊತೆ ಸಂಬಂಧಎಂದು ಅನುಮಾನಿಸಿ ಪ್ರಿಯತಮೆಯನ್ನು ಪ್ರಿಯಕರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆಯ ಲಾಡ್ಜ್ ವೊಂದರಲ್ಲಿ ನಡೆದಿದೆ.ಗಂಗಾ ಕೊಲೆಯಾದ ಯುವತಿ, ಗೋಕುಲ್ ಕೃಷ್ಣ ಕೊಲೆ ಮಾಡಿದ ಆರೋಪಿ.ಗಂಗಾ ಹಾಗೂ ಗೋಕುಲ್ ಕೃಷ್ಣ ಮೂಲತಃ ಕೇರಳ ಮೂಲದವರು. ನೆಲಮಂಗಲದ ನರ್ಸಿಂಗ್ ಕಾಲೇಜು ಒಂದರಲ್ಲಿ ಓದುತ್ತಿದ್ದರು. ಕಳೆದ ನಾಲ್ಕು ವರ್ಷದಿಂದ ಇಬ್ಬರು ಪ್ರೀತಿಯಲ್ಲಿದ್ದರು. ಆದರೆ ಇಬ್ಬರ ನಡುವೆ ಇತ್ತೀಚಿಗೆ ಮನಸ್ತಾಪ ಹೆಚ್ಚಾಗಿತ್ತು ಎನ್ನಲಾಗಿದೆ.

ನಿನ್ನೆ ಕಾಟನ್ ಪೇಟೆಯ ಲಾಡ್ಜ್‌ ನಲ್ಲಿ ರೂಂ ಬುಕ್ ಮಾಡಿ ಹೋಗಿದ್ದಾರೆ.ಈ ವೇಳೆ ಮೊದಲೇ ಚಾಕು ಖರೀದಿಸಿ ಬಂದಿದ್ದ ಗೋಕುಲ್ ಇಂದು ಬೆಳಗ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.

- Advertisement -

Related news

error: Content is protected !!