Sunday, June 21, 2026
spot_imgspot_img
spot_imgspot_img

ಸಮಬಲದಲ್ಲಿದ್ದ ವೀರಕಂಬ ಗ್ರಾಮ ಪಂಚಾಯತ್ ನಲ್ಲಿ ರಾಜಕೀಯ ತಿರುವು- ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿಜೆಪಿ ಗೆ ಸೇರ್ಪಡೆ!

- Advertisement -
- Advertisement -

ಬಂಟ್ವಾಳ: ವೀರಕಂಭ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯೆ ಲಲಿತಾರವರು ಇಂದು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಮೂಲಕ 2 ಪಕ್ಷಗಳು ಸಮಬಲದಲ್ಲಿದ್ದ ವೀರಕಂಭ ಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರಕ್ಕೇರುವಂತಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ದೇವಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಡೊಂಬಯ ಅರಳ. ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಚಿದಾನಂದ ರೈ, ಪುರುಷೋತ್ತಮ ಶೆಟ್ಟಿ, ಯುವ ಮೋರ್ಚಾದ ಸುದರ್ಶನ್ ಬಜ, ಮಾಧ್ಯಮ ಪ್ರಮುಖರಾದ ಸಂದೇಶ್ ಶೆಟ್ಟಿ, ಹಿರಿಯರಾದ ವಿಷ್ಣು ಭಟ್, ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿ, ಪ್ರಭಾರಿ ಸುಧಾಕರ ರೈ, ಪಂಚಾಯತ್ ಸದಸ್ಯರುಗಳಾದ ಜಯಪ್ರಸಾದ್, ದಿನೇಶ್, ಸಂದೀಪ್, ಉಮಾವತಿ, ಜಯಂತಿ, ಲಕ್ಷ್ಮಿ, ಮೀನಾಕ್ಷಿ ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!