Monday, May 6, 2024
spot_imgspot_img
spot_imgspot_img

(ಜು.29) ಪುತ್ತೂರು ದರ್ಬೆಯ ಪ್ರಶಾಂತ್ ಮಹಲ್‌ನಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ

- Advertisement -G L Acharya panikkar
- Advertisement -

ಸುಮಾರು 49 ಬಗೆಯ ವಿಶೇಷ ಖಾದ್ಯಗಳು, ಆಟಿದ ಗೊಬ್ಬುಲು- ಛಾವಡಿ ಲೇಸ್, ತುಳುನಾಡ ಸಾಂಸ್ಕೃತಿಕ ವೈಭವ

ಸವಣೂರು ಸೀತಾರಾಮ ರೈ ಅಧ್ಯಕ್ಷತೆಯಲ್ಲಿ ಪುತ್ತೂರು ದರ್ಬೆಯಲ್ಲಿರುವ ಪ್ರಶಾಂತ್ ಮಹಲ್‌ನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ 29.07.2023 ನೇ ಶನಿವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯ ವರೆಗೆ ಜರಗಲಿದೆ.

ಸುಮಾರು 49 ಬಗೆಯ ವಿವಿಧ ತುಳುನಾಡಿನ ಪ್ರಸಿದ್ದ ತಿಂಡಿ ತಿನಿಸುಗಳನ್ನು ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸವಿಯಬಹುದು. ತುಳು ಜನಪದ ಸಾಂಸ್ಕೃತಿಕ ಲೇಸ್ (ತುಳು ಜಾನಪದ ಸಾಂಸ್ಕೃತಿಕ ವೈಭವ), ಆಟಿದ ಗೊಬ್ಬುಲು (ತುಳುನಾಡಿನ ವಿವಿಧ ಆಟೋಟ ಸ್ಪರ್ಧೆಗಳು), ಛಾವಡಿದ ಲೇಸ್ ( ಸಭಾ ಕಾರ್ಯಕ್ರಮ) ನಡೆಯಲಿದೆ.

ಬೆಳಗ್ಗಿನ ಉಪಹಾರ ವ್ಯವಸ್ಥೆಯಲ್ಲಿ ಪದೆಂಜಿ ಪೇರ್, ಪತ್ರೋಡೆ, ಹಾಗೂ ಅವಲಕ್ಕಿಯನ್ನು ಸವಿಯಬಹುದು. 11 ಗಂಟೆಗೆ ತೆಲಿ ಬಾಜೆಲ್ ಎಂಬ ತುಳುನಾಡಿನ ಪುಷ್ಠಿಯುತ ಆಹಾರವನ್ನು ಸವಿಯಬಹುದು. ಬಳಿಕ ನೃತ್ಯ, ಸಂಗೀತ, ಏಕ ಪಾತ್ರ ಯಕ್ಷಗಾನ ಮುಂತಾದ ಹಲವು ತುಳುನಾಡಿನ ಸಾಂಸ್ಕೃತಿಕ ವೈಭವಗಳು ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ತುಳುನಾಡಿನ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ ತುಳುನಾಡಿನ ವಿವಿಧ ವಿಶೇಷ ಊಟೋಪಚಾರಗಳು ಲಭ್ಯವಿದ್ದು, ವಿಶೇಷವಾಗಿ, 3 ಬಗೆಯ ಉಪ್ಪಿನಕಾಯಿ, ತಿಮರೆ ಚಟ್ನಿ, ಪೂಂಬೆ ಚಟ್ನಿ, ತೆಕ್ಕರೆ ತಲ್ಲಿ, ತಜಂಕ್ ಪೆಲತ್ತರಿ ಸುಕ್ಕ, ಕಣಿಲೆ ಸುಕ್ಕ, ಉಪ್ಪಡ್ ಪಚ್ಚಿಲ್, ತೇಟ್ಲ ಗಸಿ, ಕಾಯ್ತಿನ ಪತ್ರೊಡೆ, ತಜಂಕ್‌ದ್ ಅಂಬಡೆ, ಮಂಜಲ್ ಇರೆತ ಗಟ್ಟಿ, ಬಾರೆದ ಇರೆತ ಗಟ್ಟಿ, ಪೆಲಕಾಯಿದ ಗಟ್ಟಿ, ನೀರ್ ದೋಸೆ, ಸೇಮೆ ಪೇರ್, ಪೆಲಕಾಯಿದ ಗಾರಿಕೆ, ನುರ್ಗೆ ತಪ್ಪುದ ಉಪ್ಪುಗರಿ, ಗಂಜಿ, ನುಪ್ಪು, ಕುಡುತ್ತ ಸಾರ್, ಉಪ್ಪುಂಚಿ, ತೌತೆ ಗಸಿ, ಕುಕ್ಕು ಪೆಜಕಾಯಿದ ಪಜ್ಜಿ ಕಜಿಪು, ಸೆಂಡಿಗೆ, ಪೆಲಕಾಯಿದ ಹಪ್ಪಳ, ಕಾಯ್ತಿನ ಪುಲಿಕೋಟೆ, ಬೆಯಿಪ್ಪಾಯಿನ ಪೆಲತ್ತರಿ, ಪೊತ್ತುದಿನ ಕುಡು ಅರಿ, ಇತ್ಯಾದಿ ಸಸ್ಯಹಾರಿ ತುಳುನಾಡಿನ ಖಾದ್ಯಗಳನ್ನು ಸವಿಯಬಹುದು.

ಮೀನು ಮಾಂಸ ಖಾದ್ಯಗಳಾದ ಎಟ್ಟಿ ಚಟ್ನಿ, ಕೊಲ್ಲತ್ತಾರು ಚಟ್ನಿ, ಕಡ್ಲೆ ಬಲ್ಯಾರ್ ಸುಕ್ಕ, ಕೋರಿ ಸುಕ್ಕ, ಕೋರಿ ರೊಟ್ಟಿ, ನುಂಗೆಲ್ ಮೀನ್‌ದ ಕಜಿಪು ಮುಂತಾದ ಖಾದ್ಯಗಳನ್ನು ಸವಿಯಬಹುದು. ಸಿಹಿ ತಿನಿಸುಗಳಾದ ಮನ್ನಿ, ಮೆಂತೆ ಗಂಜಿ, ಪದೆಂಜಿ ಸಲಾಯಿ ಪಾಯಸ, ಪೆಲಕಾಯಿ+ಕಡ್ಲೆ, ಸಲಾಯಿ ಪಾಯಸ, ಅಲೆ.. ಮುಂತಾದ ಖಾದ್ಯಗಳು ಅಭ್ಯವಿರುತ್ತದೆ. ಸಂಜೆ ಚಹಾ-ತಿಂಡಿ ವ್ಯವಸ್ಥೆ ಲಭ್ಯವಿದ್ದು, ಚಾ, ಗೋಲಿಬಜೆ ಮುಂತಾದ ಚಹಾ ತಿಂಡಿಗಳನ್ನು ಸವಿಯಬಹುದು.

ಸ್ಪೆಷಲ್ ಆಟಿಯ ವಿಶೇಷ ತಿನಿಸುಗಳ ಕೂಪನ್‌ನ್ನು ಪ್ರಶಾಂತ್ ಹೊಟೇಲ್ ಬಿಲ್ಡಿಂಗ್ ಕೌಂಟರ್‌ನಲ್ಲಿ ಪಡೆದುಕೊಳ್ಳಿ.
ವಿಶೇಷ ಸೂಚನೆ: ಪ್ರವೇಶ ಶುಲ್ಕ 349 ರೂ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08251-450029, 7349349735, 7829347459

- Advertisement -

Related news

error: Content is protected !!