ಬಂಟ್ವಾಳ: ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿನ ಸಹೋದರಿಯೋರ್ವರ ಮನೆಗೆ ನಯನಾಡಿನ ಸಮಾಜಮುಖಿ ಸೇವೆಯ ಧ್ಯೇಯ ವಿರಿಸಿಕೊಂಡ “ಕಾಮಧೇನು ತಂಡ” ಇತ್ತೀಚೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಯನ್ನು ಉಚಿತವಾಗಿ ಮಾಡಿಕೊಟ್ಟಿದೆ.

ಮಹಾಮಾರಿ ಕೋವಿಡ್19 ನಿಂದಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡು ಆರ್ಥಿಕ ವಾಗಿ ಸಂಕಷ್ಟದ ಪರಿಸ್ಥಿತಿ ಯಲ್ಲಿದ್ದರು ನಯನಾಡಿನ ಕಾಮಧೇನು ತಂಡ ಮೆಸ್ಕಾಂ ಅಧಿಕಾರಿಗಳ ಸಹಕಾರದೊಂದಿಗೆ ಒಂದು ವಿದ್ಯುತ್ ಕಂಬ ಹಾಗೂ ಮನೆಗೆ ಹತ್ತು ಪಾಯಿಂಟ್ ಗಳ ಪೂರ್ಣ ಪ್ರಮಾಣದ ವಿದ್ಯುತ್ ವ್ಯವಸ್ಥೆ ಯನ್ನು ಮಾಡಿ ಕೊಟ್ಟಿದೆ. ಕಳೆದೆರಡು ವರ್ಷಗಳಿಂದ ಸುಮಾರು ಒಂದು ಲಕ್ಷ ರೂಪಾಯಿ ಗಿಂತಲೂ ಅಧಿಕ ಮೊತ್ತದ ಸಹಾಯವನ್ನು ಸುಮಾರು 20ರಷ್ಟು ಕುಟುಂಬ ಗಳಿಗೆ ಒದಗಿಸಿ ಕೊಡುವ ಮುಖೇನ ತನ್ನ ಸೇವಾ ಧ್ಯೇಯ ದಲ್ಲಿ ಸಂತೃಪ್ತಿ ಯನ್ನು ಕಂಡಿದೆ.

ನಯನಾಡಿನ ಹಿರಿಯರ ಹಾಗೂ ತರುಣರಿಂದ ಸಮ್ಮಿಳಿತಗೊಂಡ ಕಾಮಧೇನು ತಂಡ ಆರ್ಥಿಕ ಸಂಕಷ್ಟ ದಲ್ಲಿರುವ ಈ ಭಾಗದ ಜನರ ನಿಜಾರ್ಥದ ಕಾಮಧೇನು ಆಗಿದೆ. ಯಾವುದೇ ಪ್ರಚಾರ, ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಭಾವನೆಯನ್ನು ಹೊಂದಿರುವ ಈ ತಂಡದ ಇತ್ತೀಚೆಗಿನ ಬಡಪಾಯಿ ಕುಟುಂಬಕ್ಕೆ ಬೆಳಕನ್ನು ತಂದು ಕೊಟ್ಟ ಕಾಯಕ ಊರವರ ಬಹುಪ್ರಶಂಶೆಗೆ ಕಾರಣವಾಗಿದೆ.
