Sunday, June 21, 2026
spot_imgspot_img
spot_imgspot_img

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ‘ಪ್ರಜಾ ಸೇವೆ’ ಇಲಾಖೆ ಸ್ಥಾಪನೆ: ಸಿ.ಎಂ. ಡಿಕೆ ಶಿವಕುಮಾರ್

- Advertisement -
- Advertisement -

ಬೆಂಗಳೂರು: ರಾಜ್ಯದ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ‘ಪ್ರಜಾ ಸೇವೆ’ ಎನ್ನುವ ಹೊಸ ಇಲಾಖೆ ಸ್ಥಾಪನೆ ಮಾಡಲಾಗಿದ್ದು, ಇದಕ್ಕೆ ಪ್ರತ್ಯೇಕ ಮಂತ್ರಿಯನ್ನು ಸಹ ನೇಮಕ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನ ಕೈಗೊಳ್ಳಲಾಯಿತು. ಸಭೆಯ ಬಳಿಕ ಸಿಎಂ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಯು.ಟಿ ಖಾದರ್‌ ಉಪಸ್ಥಿತರಿದ್ದರು.

ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಸಮಸ್ಯೆ ಇರುವಾಗ ನಾವು ಏನಾದರೂ ನ್ಯಾಯ ಕೊಡೋಕೆ ಸಾಧ್ಯನಾ ಅನ್ನೋದು ಮುಖ್ಯ. ನಾವು ಪ್ರಜಾ ಸೇವೆ ಇಲಾಖೆ ಖಾತೆ ಸೃಷ್ಟಿಸಿ, ಹೊಸ ಮಿನಿಸ್ಟರ್ ನಿಯೋಜಿಸುತ್ತಿದ್ದೇವೆ. ಐಎಎಸ್ ಅಧಿಕಾರಿ ಒಬ್ಬರು ಈ ಇಲಾಖೆಯಲ್ಲಿ ಇರುತ್ತಾರೆ. ಯಾವುದೇ ಸಚಿವರಿಗೆ ಅರ್ಜಿ ಕೊಟ್ಟರೂ ಈ ಇಲಾಖೆಗೆ ತರುತ್ತೇವೆ ಎಂದು ವಿವರಿಸಿದ್ದಾರೆ.

ಅಲ್ಲದೇ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು 224 ಕ್ಷೇತ್ರಗಳಿಗೂ ಹೋಗಿ ಸಭೆಗಳನ್ನು ನಡೆಸಬೇಕು. ವಾರಕ್ಕೆ ಒಂದು ಕಡ್ಡಾಯವಾಗಿ, ಶಾಸಕರ ಜೊತೆಗೂಡಿ ಹೋಗಿ ಜನಸ್ಪಂದನಾ ಸಭೆ ಮಾಡಬೇಕು. ಅಲ್ಲಿಂದ ತಂದು ಅರ್ಜಿಗಳನ್ನ ತಂದು ರಿವ್ಯೂ ಮಾಡಿ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದಾರೆ.

ಎಲ್ಲಾ ಸಚಿವರು ಈ ಇಲಾಖೆ ಒಳಗೆ ಬರ್ತಾರೆ. 224 ಕ್ಷೇತ್ರಗಳಿಗೂ ಜಿಲ್ಲಾ ಉಸ್ತುವಾರಿ ಸಚಿವರು ಹೋಗಬೇಕಾಗುತ್ತೆ. ವಾರಕ್ಕೆ ಒಂದು ದಿನ ಸಚಿವರು ಹೋಗಬೇಕು, ಜನಸ್ಪಂದನ ಸಭೆಗಳನ್ನ ಮಾಡಬೇಕು, ಸ್ಥಳೀಯ ಶಾಸಕರನ್ನು ಪರಿಗಣಿಸಬೇಕು ಎಂದು ಹೇಳಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!