Friday, June 26, 2026
spot_imgspot_img
spot_imgspot_img

ನೂಜಿಬಾಳ್ತಿಲ: ಪಿಗ್ನಿ ಸಂಗ್ರಾಹಕ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಕಡಬ: ನೂಜಿಬಾಳ್ತಿಲ ಗ್ರಾಮದ ಕಟ್ಟತ್ತಡ್ಕ ನಿವಾಸಿ, ನೂಜಿಬಾಳ್ತಿಲ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಪಿಗ್ನಿ ಸಂಗ್ರಾಹಕ ಶಶಿಧರ ಬಿ.ಕೆ. ಅವರು ಇಂದು ಮುಂಜಾನೆ ಆತ್ಮಹತ್ಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಿನಾಂಕ 07-09-2025 ರಂದು ರಾತ್ರಿ 10-00 ಘಂಟೆಗೆ ಊಟ ಮಾಡಿ ಮಲಗಿದ್ದು, ಬೆಳಿಗ್ಗೆ 06-00 ಗಂಟೆಗೆ ಎದ್ದಾಗ ಗಂಡ ಮನೆಯಲ್ಲಿ ಇಲ್ಲದೇ ಇದ್ದು ಮನೆಯ ಪರಿಸರದಲ್ಲಿ ಹುಡುಕಿ ನೆರೆ ಮನೆಯ ಲತೀಶ್ ಕುಮಾರ್ ರವರಿಗೆ ದೂರವಾಣಿ ಮೂಲಕ ತಿಳಿಸಿ ಲತೀಶ ರವರು ತೋಟದಲ್ಲಿ ಹುಡುಕುವ ಸಮಯ ಶಶಿಧರ ರವರು ತೋಟದಲ್ಲಿ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಲತೇಶ ರವರು ತಿಳಿಸಿರುತ್ತಾರೆ. ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿರುತ್ತಾರೆ. ಗಂಡ ಶಶಿಧರ ರವರು ಯಾವುದೋ ವಿಷಯಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07-09-2025 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 08-09-2025 ರಂದು ಬೆಳಿಗ್ಗೆ 08-45 ಗಂಟೆಯ ಮದ್ಯೆ ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 24/2025 ಕಲಂ:194 BNSS-2023. ನಂತೆ ಪ್ರಕರಣ ದಾಖಲಾಗಿರುತ್ತದೆ.

ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!