Monday, February 10, 2025
spot_imgspot_img
spot_imgspot_img

ಕಡಬ: ಹಾಡಹಗಲೇ ನಗದು, ಚಿನ್ನಾಭರಣ ಕಳವು ಪ್ರಕರಣ; ಆರೋಪಿ ಅರೆಸ್ಟ್..!

- Advertisement -
- Advertisement -

ಕಡಬ: ಮನೆಯೊಂದರಿಂದ ಹಾಡಹಗಲೇ ನಗದು ಮತ್ತು ಚಿನ್ನಾಭರಣ ದೋಚಿದ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐದೇ ದಿನದಲ್ಲಿ ಬಂಧಿಸುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಕರ್ಮಾಯಿ ನಿವಾಸಿ ಸಿನು ಕುರಿಯನ್ ಎಂದು ಗುರುತಿಸಲಾಗಿದೆ.

ಕಳವಾಗಿದ್ದ ಚಿನ್ನವನ್ನು ಹಾಗೂ ಸ್ವಲ್ಪ ಹಣವನ್ನೂ ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 102 ನೆಕ್ಕಿಲಾಡಿ ಗ್ರಾಮದ ಮರ್ದಾಳ ಬಳಿಯ ನಿವಾಸಿ ಆಟೋ ಚಾಲಕ ಕುರಿಯಕೋಸ್ ಯಾನೆ ಜೇಮ್ಸ ಅವರು ಭಾನುವಾರ ಪತ್ನಿ ಹಾಗೂ ಮಗನೊಂದಿಗೆ ಚರ್ಚ್ ಪ್ರಾರ್ಥನೆಗಾಗಿ ತೆರಳಿದ್ದರು. ಪ್ರಾರ್ಥನೆ ಬಳಿಕ ಮನೆಗೆ ಹಿಂತಿರುಗಿದಾದ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಕಳ್ಳತನ ನಡೆದಿರುವ ಮನೆಯ ಸಮೀಪವಿರುವ ಮನೆಯ ಯುವಕ ಸಿನು ಕುರಿಯನ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂಬ ಸುಳಿವು ಪೊಲೀಸರಿಗೆ ದೊರಕಿತ್ತು. ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ ಪೊಲೀಸರು ಹಲವು ಮಹತ್ವದ ಸುಳಿವುಗಳ ಆಧಾರದ ಮೇರೆಗೆ ಸಿನು ಕುರಿಯನ್‌ನನ್ನು ಬುಧವಾರ ರಾತ್ರಿಯೇ ವಶಕ್ಕೆ ಪಡೆದುಕೊಂಡಿದ್ದರು.

ಆರೋಪಿ ಸಿನು ಕುರಿಯನ್ ಸಾಲದ ಸುಳಿಯಲ್ಲಿ ಸಿಲುಕಿದ್ದೇ ಈ ಕೃತ್ಯಕ್ಕೆ ಕಾರಣ ಎಂದು ತನಿಖೆ ವೇಳೆ ತಿಳಿದುಬಂದಿದೆ. ಈತ ಕಡಬದ ಜವಳಿ ಮಳಿಗೆಯಲ್ಲಿ ಕೆಲಸಮಾಡುತ್ತಿದ್ದ ಎನ್ನಲಾಗಿದೆ. ಇನ್ನು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇನ್ನು ಆರೋಪಿ ಸಿನು ಕುರಿಯನ್ ಕಳ್ಳತನ ಮಾಡಿದ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಆತ ರೈಲು ಹಳಿಯತ್ತ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.

- Advertisement -

Related news

error: Content is protected !!