Tuesday, July 21, 2026
spot_imgspot_img
spot_imgspot_img

ಕಡಬ: ತೋಟದಿಂದ ಅಡಿಕೆ ಕಳವು: ದೂರು ದಾಖಲು!

- Advertisement -
- Advertisement -

ಕಡಬ:ತಾಲೂಕಿನ ಅಲಂಕಾರು ನಿವಾಸಿ ಸತೀಶ( 36) ಅವರ ಮನೆಯಲ್ಲಿ ಅಡಿಕೆ ಕಳವು ಆಗಿರುವ ಬಗ್ಗೆ ದೂರು ದಾಖಲಾಗಿದೆ.

ದಿ. 25-01-2026 ರಂದು ರಾತ್ರಿ 02.00 ಗಂಟೆಗೆ ತೋಟಕ್ಕೆ ನೀರು ಹಾಯಿಸುವ ವೇಳೆ ಯಾರೋ ಮಾತನಾಡುವ ಶಬ್ದ ಕೇಳಿ ಟಾರ್ಚ್ ಲೈಟ್ ನಂದಿಸಿ ಹತ್ತಿರ ಹೋದಾಗ, ಇಬ್ಬರು ವ್ಯಕ್ತಿಗಳು ತೋಟದಿಂದ ಕಳವು ಮಾಡಿದ ಅಡಿಕೆಯನ್ನು ತೆಗೆದುಕೊಂಡು ಓಡಿ ಹೋಗಿ, ತೋಟದ ಬೇಲಿಯ ಹೊರಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನದಲ್ಲಿ ಹಾಕಿ ಪರಾರಿಯಾಗಿರುವುದಾಗಿದೆ. ಕಳವಾದ ಅಡಿಕೆ ಅಂದಾಜು ರೂ.15,000/- ಆಗಬಹುದು ಎಂದು ನೀಡಿದ ದೂರಿನ ಅನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ 11/2026 ಕಲಂ:303(2) BNS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!