Saturday, June 6, 2026
spot_imgspot_img
spot_imgspot_img

ಕಡಬ: ಸಹೋದರರ ನಡುವೆ ಜಗಳ: ಓರ್ವನಿಗೆ ಕತ್ತಿಯಿಂದ ಹಲ್ಲೆ; ಪ್ರಕರಣ ದಾಖಲು..!

- Advertisement -
- Advertisement -

ಕಡಬ: ಮೂವರು ಸಹೋದರರ ನಡುವೆ ಜಗಳ ನಡೆದು ಓರ್ವನಿಗೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ನಡೆದಿದೆ.

ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ನಿವಾಸಿ ರಾಜಶೇಖರ (37) ಹಲ್ಲೆಗೊಳಗಾದವರು. ಅವರ ಸಹೋದರ ಜಯರಾಜ್ ಹಲ್ಲೆ ಆರೋಪಿ ಎಂದು ಗುರುತಿಸಲಾಗಿದೆ.

ರಾಜಶೇಖರ ಎಂಬವರು ಜುಲೈ 16.07.2025 ರಂದು ರಾತ್ರಿ ವೇಳೆ ಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿಯಲ್ಲಿರುವ ತನ್ನ ಮನೆಯಲ್ಲಿದ್ದಾಗ ಸ್ಥಳಕ್ಕೆ ಬಂದ ಅವರ ಸಹೋದರ ಮನೋಜ್‌ಕುಮಾರ್‌ ಎಂಬವರು ರಾಜಶೇಖರ ಎಂಬವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ.

ಈ ವೇಳೆ ಅವರಿಬ್ಬರ ನಡುವೆ ಜಗಳವಾಗಿರುತ್ತದೆ. ಅದೇ ವೇಳೆ ರಾಜಶೇಖರರವರ ಮತ್ತೋರ್ವ ಸಹೋದರ ಜಯರಾಜ್‌ ಎಂಬವರು ಕತ್ತಿಯಿಂದ ಹಲ್ಲೆ ಮಾಡಿದ್ದು, ಹಲ್ಲೆ ಪರಿಣಾಮ ರಕ್ತಗಾಯವಾಗಿರುತ್ತದೆ. ಗಾಯಗೊಂಡಿದ್ದ ರಾಜಶೇಖರರವರನ್ನು ಅವರ ಮತ್ತೋರ್ವ ಸಹೋದರ ಬಾಲಕೃಷ್ಣ ಎಂಬವರು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 63/2025 ಕಲಂ: 352, 118(1) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!