Friday, June 5, 2026
spot_imgspot_img
spot_imgspot_img

ಮಂಗಳೂರು: ಖಾಸಗಿ ಬಸ್ಸಿನಡಿಗೆ ಬಿದ್ದು ಬಾಲಕ ಸಾವು..!!

- Advertisement -
- Advertisement -
vtv vitla

ಮಂಗಳೂರು : ಖಾಸಗಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಪುಟ್ಟ ಬಾಲಕ ಬಸ್ ನಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಬೆಂದೂರ್‌ವೆಲ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಮಗುವಿನ ತಾಯಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತಪಟ್ಟ ಬಾಲಕನನ್ನು ನಗರದ ಶಾರದಾ ವಿದ್ಯಾಸಂಸ್ಥೆಯ 5ನೇ ಕ್ಲಾಸ್ ತರಗತಿಯ ವಿದ್ಯಾರ್ಥಿ ಹಾರ್ದಿಕ್‌(7) ಎಂದು ಗುರುತಿಸಲಾಗಿದೆ. ಇಂದು ಸಂಜೆ ಸ್ವಾತಿ ತನ್ನ ಮಗುವಿನೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಬಸ್‌ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದ ಸ್ಕೂಟಿಯ ಹ್ಯಾಂಡಲ್‌ ಬಸ್‌ಗೆ ತಾಗಿ ಮಗುವಿನ ಸಮೇತ ತಾಯಿ ಕೆಳಗೆ ಬಿದ್ದಿದ್ದಾರೆ.

ಈ ವೇಳೆ ಬಸ್‌ನ ಚಕ್ರದಡಿಗೆ ಮಗು ಸಿಲುಕಿ ಮೃತಪಟ್ಟಿದೆ. ಘಟನೆಯಲ್ಲಿ ತಾಯಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮಂಗಳೂರು ನಗರ ಪೂರ್ವ ಟ್ರಾಫಿಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವಾತಿ ಅವರು ಖಾಸಗಿ ಕೋಚಿಂಗ್ ಸೆಂಟರಿನಲ್ಲಿ ಉಪನ್ಯಾಸಕಿಯಾಗಿದ್ದು ನಂತೂರಿನಲ್ಲಿ ಮನೆ ಹೊಂದಿದ್ದಾರೆ. ಹುಡುಗನ ತಂದೆ ಪ್ರಮೋದ್, ಬಂಟ್ಸ್ ಹಾಸ್ಟೆಲ್ ನಲ್ಲಿ ಆಟೊಮೊಬೈಲ್ ಸಂಸ್ಥೆಯನ್ನು ಹೊಂದಿದ್ದಾರೆ.

- Advertisement -

Related news

error: Content is protected !!