Monday, August 10, 2026
spot_imgspot_img
spot_imgspot_img

ಕಡಬ: ಹೊಳೆಗೆ ಬಿದ್ದು ಕೃಷಿಕ ಮೃತ್ಯು

- Advertisement -
- Advertisement -

ಕಡಬ: ಹೊಳೆಗೆ ಬಿದ್ದು ಕೃಷಿಕರೋರ್ವರು ಮೃತಪಟ್ಟ ಘಟನೆ ಕಡಬ ಸಮೀಪದ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಇಚ್ಲಂಪಾಡಿ ಗ್ರಾಮದ ಕುಡಾಲ ನಿವಾಸಿ ಕೃಷ್ಣಪ್ಪ ಗೌಡ ಯಾನೆ ಕಿಟ್ಟಣ್ಣ (60) ಎಂದು ಗುರುತಿಸಲಾಗಿದೆ. ಜು.9ರಂದು ಮಧ್ಯಾಹ್ನ ಇಚ್ಲಂಪಾಡಿಯ ಕೊಕ್ಕೊ ಕಾಡಿನ ಹೊಳೆಬದಿಗೆ ಹೋದವರು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದ ವೇಳೆ ಅವರ ಚಪ್ಪಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ ತನಕ ಹೊಳೆ ಬದಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ದೊರೆತಿರಲಿಲ್ಲ.

ಜು.10ರಂದು ಬೆಳಿಗ್ಗೆ ಹೊಳೆಬದಿ ಮತ್ತೆ ಹುಡುಕಾಟ ನಡೆಸಿದಾಗ ಗುಂಡ್ಯಹೊಳೆ ಸೇರುವಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!