Tuesday, April 23, 2024
spot_imgspot_img
spot_imgspot_img

ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಲ್ಲಿ ಕೊಟ್ಯಾಂತರ ರೂ. ಮರ ಕಳವು ಪ್ರಕರಣ – ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಲು ಸಿದ್ದತೆ

- Advertisement -G L Acharya panikkar
- Advertisement -

ಕಡಬ: ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಲ್ಲಿ ಕೊಟ್ಯಾಂತರ ಬೆಲೆ ಬಾಳುವ ಮರ ಕಳ್ಳತನ ಆಗಿದ್ದರೂ ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಬದಲು, ದೂರು ನೀಡಿದಾತನ ವಿರುದ್ದವೇ ಸೇಡು ತೀರಿಸುವ ಪ್ರಯತ್ನ ನಡೆಸುತ್ತಿರುವ ಸಂಚಾರಿ ದಳದ ವಲಯ ಅರಣ್ಯ ಅಧಿಕಾರಿ ಸಂಧ್ಯಾ ಹಾಗೂ ಇತರೆ ಅರಣ್ಯಾಧಿಗಳ ವಿರುದ್ದ ಮತ್ತು ಪೊಲೀಸ್ ಸಿಬ್ಬಂದಿ ವಿರುದ್ಧ ಹೋರಾಟ ನಡೆಸಲು ಆರ್.ಟಿ.ಐ ಕಾರ್ಯಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ, ನೀತಿ ತಂಡ ರಾಜ್ಯಾಧ್ಯಕ್ಷರೂ ಆದ ಜಯನ್ ಸಿದ್ದತೆ ನಡೆಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ರಾತ್ರೋ ರಾತ್ರಿ ಮನೆಗೆ ನುಗ್ಗಿ ದಾಂಧಲೇ ಎಬ್ಬಿಸಿರುವ ಅರಣ್ಯ ಇಲಾಖೆಯವರ ವಿರುದ್ದ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಸಲ್ಲಿಸಲು ಸಿದ್ದತೆ ನಡೆಸುತ್ತಿದ್ದು,ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಯನ್ ಅವರು ಕೊಟ್ಯಾಂತರ ಮರ ಕಳ್ಳತನ ಆಗಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ, ಮರ ಕಳ್ಳತನದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾದ ಅಧಿಕಾರಿಗಳು ಹಾಗೂ ಅದೇ ಸ್ತರದ ಇನ್ನೊರ್ವ ಅಧಿಕಾರಿ ತನಿಖೆ ನಡೆಸುವುದು ಅಂದರೆ ಏನರ್ಥ, ಆ ಅಧಿಕಾರಿ ಕೂಡ ರಾತ್ರೋ ರಾತ್ರಿ ಗೂಂಡಾಗಳ ರೀತಿಯಲ್ಲಿ ವರ್ತಿಸಿ ಮಹಿಳೆಯರು, ಮಕ್ಕಳಿಗೆ ಹಲ್ಲೆ ನಡೆಸುತ್ತಿದ್ದಾರೆ ಎಂದರೆ ಇದನ್ನು ಕೇಳುವವರು ಯಾರು ಇಲ್ಲವೇ, ಕೂಡಲೇ ನ್ಯಾಯಾಲಯ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸುಬ್ರಹ್ಮಣ್ಯ ವಲಯ ಅರಣ್ಯದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಈ ತನಕ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ನಡೆಸಿ ಶಾಮೀಲು ಆಗಿರುವ ಅಧಿಕಾರಿಗಳ ವಿರುದ್ದ ಕೂಡಲೇ ತನಿಖೆ ನಡೆಸಬೇಕು ಅಲ್ಲಿಯವರೆಗೆ ಹೋರಾಟ ಮುಂದುವರಿಲಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!