Thursday, July 23, 2026
spot_imgspot_img
spot_imgspot_img

ಕಡಬ: ಟೆಂಪೊ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು

- Advertisement -
- Advertisement -

ಕಡಬ: ಗೂಡ್ಸ್‌ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಸೋಮವಾರ ಕಡಬ ಠಾಣಾ ವ್ಯಾಪ್ತಿಯ ಆತೂರಿನಲ್ಲಿ ನಡೆದಿದೆ.

ಮೃತರನ್ನು ಕಡಬ ತಾಲೂಕಿನ ಸುಂಕದಕಟ್ಟೆ ನಿವಾಸಿ ಅಬ್ದುಲ್ ಖಾದ‌ರ್ ಸಖಾಫಿ ಎಂದು ಗುರುತಿಸಲಾಗಿದೆ.

ಅಬ್ದುಲ್ ಖಾದ‌ರ್ ಸಖಾಫಿ ಕಾಸರಗೋಡಿನ ಮುಹಿಮ್ಮಾತ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಬಂಧಿಕರ ಮದರಂಗಿ ಕಾರ್ಯಕ್ರಮಕ್ಕೆ ಮನೆಯವರ ಜೊತೆ ಬಂದಿದ್ದ ಅವರು ಆತೂರಿನಲ್ಲಿ ಬಸ್ಸಿನಿಂದ ಇಳಿದು, ಮನೆಯವರನ್ನು ರಿಕ್ಷಾದಲ್ಲಿ ಕಳುಹಿಸಿದ್ದರು. ಬಳಿಕ ಕಾರ್ಯಕ್ರಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಗೂಡ್ಸ್ ಟೆಂಪೊ ಢಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಬ್ದುಲ್ ಖಾದರ್ ಸಖಾಫಿಯವರನ್ನು ಸ್ಥಳೀಯರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಶೀಲಿಸಿದ ವೈದ್ಯರು ಅದಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!