Monday, September 21, 2026
spot_imgspot_img
spot_imgspot_img

ಕಡಬ: ಹಿಂದೂ ರುದ್ರ ಭೂಮಿಯಲ್ಲಿ ಅರೆಬೆಂದ ಶವ

- Advertisement -
- Advertisement -

ಕಡಬ: ಇಲ್ಲಿನ ಹಿಂದೂ ರುದ್ರ ಭೂಮಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತದೇಹವೊಂದು ಶನಿವಾರ ರಾತ್ರಿ ಕಂಡು ಬಂದಿದೆ.

ಕಡಬ ಸಮೀಪದ ಗೋಳಿಯಡ್ಕ ನಿವಾಸಿಯೋರ್ವರು ಶನಿವಾರದಂದು ಮೃತಪಟ್ಟಿದ್ದು, ಕಡಬದ ಹಿಂದೂ ರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು. ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಮೃತದೇಹಕ್ಕೆ ಬೆಂಕಿ ಹಚ್ಚಿ ತೆರಳಿದ್ದರು ಎನ್ನಲಾಗಿದೆ.

ಸಂಜೆ ವೇಳೆಗೆ ಪರಿಸರದ ವಾಸಿಗಳಿಗೆ ವಾಸನೆ ಬರಲಾರಂಭಿಸಿದ್ದು, ಸ್ಮಶಾನಕ್ಕೆ ತೆರಳಿದಾಗ ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಸ್ಥಳೀಯರು ಸೇರಿ ಬೆಂಕಿ ಹಾಕಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!