Wednesday, October 14, 2026
spot_imgspot_img
spot_imgspot_img

ಕಡಬ: ಐತ್ತೂರು ಮಾಯಿಪಾಜೆ ರಬ್ಬರ್ ತೋಟದಲ್ಲಿ ಗುಂಡಿನ ಸದ್ದು – ರಕ್ತದ ಕಲೆ, ಮದ್ದಿನ ಕವರ್ ಪತ್ತೆ

- Advertisement -
- Advertisement -

ಕಡಬ: ಐತ್ತೂರು ಮಾಯಿಪಾಜೆಯ ರಬ್ಬರ್ ತೋಟದಲ್ಲಿ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಸತತ ಮೂರು ಬಾರಿ ಬಂದೂಕಿನ ಗುಂಡಿನ ಸದ್ದು ಕೇಳಿಬಂದಿದೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಪರಿಶೀಲನೆ ನಡೆಸಿದಾಗ, ರಬ್ಬರ್ ತೋಟದಲ್ಲಿ ರಕ್ತದ ಕಲೆಗಳು ಹಾಗೂ ಬಂದೂಕಿನ ಮದ್ದಿನ ಕವರ್‌ಗಳು ಪತ್ತೆಯಾಗಿವೆ. ಕಾಡುಪ್ರಾಣಿಯೊಂದು ಗುಂಡೇಟಿಗೆ ಒಳಗಾಗಿರುವ ಗುರುತುಗಳೂ ಕಂಡುಬಂದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಡುಹಂದಿ ಅಥವಾ ಜಿಂಕೆಯನ್ನು ಗುರಿಯಾಗಿಸಿಕೊಂಡು ಬೇಟೆಗಾರರು ಗುಂಡು ಹಾರಿಸಿ, ಬಳಿಕ ಪ್ರಾಣಿಯನ್ನು ಸ್ಥಳದಿಂದ ಸಾಗಿಸಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಆದರೆ, ಯಾವ ಪ್ರಾಣಿಯನ್ನು ಬೇಟೆಯಾಡಲಾಗಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ.

ಈ ಘಟನೆ ಸುಬ್ರಹ್ಮಣ್ಯ ಮತ್ತು ಪಂಜ ವಲಯ ಅರಣ್ಯಗಳ ಗಡಿ ಪ್ರದೇಶದಲ್ಲಿ ನಡೆದಿರುವುದರಿಂದ ಅಕ್ರಮ ಬೇಟೆಯ ಕುರಿತು ಆತಂಕ ವ್ಯಕ್ತವಾಗಿದೆ. ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಗಸ್ತು ಹೆಚ್ಚಿಸಿ, ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಘಟನೆಯ ಕುರಿತು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಅವರನ್ನು ಸಂಪರ್ಕಿಸಿದಾಗ, ಇಲಾಖೆಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!