Thursday, April 18, 2024
spot_imgspot_img
spot_imgspot_img

ಕಡಬ: ಸೋಲಾರ್ ಬೀದಿ ದೀಪಗಳ ಬ್ಯಾಟರಿ ಕಳವು; ಮುಂದುವರಿದ ಚೋರರ ಕೈಚಳಕ

- Advertisement -G L Acharya panikkar
- Advertisement -

ಕಡಬ: ದಿನದಿಂದ ದಿನಕ್ಕೆ ಸೋಲಾರ್‌ ಬೀದಿ ದೀಪಗಳ ಬ್ಯಾಟರಿಗಳನ್ನು ಕದ್ದೊಯ್ಯುವವರ ಜಾಲ ಸಕ್ರಿಯವಾಗುತ್ತಿದ್ದು, ಕಡಬದ ಹಲವು ಪ್ರದೇಶಗಳಲ್ಲಿ ಮತ್ತೆ ಕತ್ತಲು ಆವರಿಸಿದೆ. ೨ ವರ್ಷಗಳ ಹಿಂದೆ ಕಡಬ ತಾಲೂಕು ವ್ಯಾಪ್ತಿಯ ವಿವಿಧೆಡೆ ಒಂದೇ ದಿನ ರಾತ್ರಿ 50ಕ್ಕೂ ಹೆಚ್ಚು ಸೋಲಾರ್‌ ಬೀದಿ ದೀಪಗಳ ಬ್ಯಾಟರಿಗಳನ್ನು ಕಳ್ಳರು ಪಾಲಾಗಿತ್ತು. ಮತ್ತೆ ಕುಟ್ರಾಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಘಟನೆ ಮರುಕಳಿಸಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಸೋಲಾರ್‌ ಬೀದಿ ದೀಪಗಳಿಂದ ಮತ್ತು ವಾಹನಗಳಿಂದ ಬ್ಯಾಟರಿಗಳನ್ನು ಕದ್ದೊಯ್ಯುವ ವ್ಯವಸ್ಥಿತ ಕುತಂತ್ರ ಜಾಲ ಇದಾಗಿದ್ದು, ಕಳ್ಳರ ತಂಡ ಹಗಲು ಹೊತ್ತಿನಲ್ಲಿ ಬಂದು ನಿರ್ಜನ ಪ್ರದೇಶದ ಬೀದಿ ದೀಪಗಳನ್ನು ಗುರುತಿಸಿಕೊಂಡು ರಾತ್ರಿ ಕಾರ್ಯಾಚರಣೆಗಿಳಿಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಪೊಲೀಸರ ಭೀತಿ ಇಲ್ಲದಿರುವುದೇ ಬ್ಯಾಟರಿ ಕಳವಿಗೆ ಕಾರಣ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಹೆಚ್ಚಿನ ಕಡೆ ಸಿ.ಸಿ. ಕೆಮರಾ ಗಳನ್ನು ಅಳವಡಿಸಲಾಗಿದ್ದರೂ ನಿರ್ವಹಣೆಯ ಕೊರತೆಯಿಂದಾಗಿ ಅವುಗಳು ಕಾರ್ಯ ನಿರ್ವಹಿಸದಿರುವುದು ಕಳ್ಳರ ಸುಳಿವು ದೊರೆಯದಿರಲು ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ವರ್ಗ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!